in the future - u will be able to do some more stuff here,,,!! like pat catgirl- i mean um yeah... for now u can only see others's posts :c
YOUTUBE ಇತಿಹಾಸದಲ್ಲೇ ಮೊದಲ ಪ್ರಯತ್ನ ನನ್ನದು ' ಮಸಾಲೆ ಬಾಳೆಹಣ್ಣು' ಕಾರ!! ಕಾರ!! ಐದು ನಿಮಿಷ ಸಾಕು ಚಪಾತಿ ಯೊಂದಿಗೆ ಇಲ್ಲವೆ, ಹಾಗೇಯೇ ಸವಿಯಿರಿ
16 - 19
ಸೌದೆ ಒಲೆಯಲ್ಲಿ ಮಾಡಿದ 'ಜೋಳದ ರೊಟ್ಟಿ' ಮತ್ತು ಜೋಳದ ಉಂಡಿ 'ಮುಟಗಿ' ಯನ್ನು ಹೇಗೆ ಮಾಡುವುದು? ನೇರವಾಗಿ ಒಲೆಯ ಮುಂದೆಯೇ ನೋಡಿ!!, ಇಂದೇ ನೋಡಿ!! , ಈಗಲೇ ಮಾಡಿ,!! ಸವಿಯಿರಿ
13 - 14
ನಮಸ್ಕಾರ 🙏ನಾನು ಕನ್ನಡಗಿತ್ತಿ
Welcome to my YouTube channel 'Eesha's Arts'. 'ಈಶಾಸ್ ಆರ್ಟ್ಸ್ ' ಯೂಟೂಬ್ ಚಾನಲ್ ಗೆ ಸ್ವಾಗತ. ನನ್ನ ಹೆಸರು ಶೈಲಾ. ನಾನೊಬ್ಬ ಗೃಹಿಣಿ . ನಮ್ಮ ಭಾರತೀಯ ಕಲೆಗಳಲ್ಲಿ ಒಂದಾದ 'ರಂಗೋಲಿ' ಕಲೆಯು ಹೆಂಗಳೆಯರ ದಿನನಿತ್ಯದ ಅಭ್ಯಾಸ, ಸಂಸ್ಕೃತಿ ಹಾಗೂ ಸತ್ಸಂಪ್ರದಾಯ. ಇಂಥ ರಂಗೋಲಿ ಕಲಿಕೆ ನನ್ನದೊಂದು ಹವ್ಯಾಸ. ನಾನು ಅಮ್ಮನಿಂದ ಕಲಿತ ಚುಕ್ಕಿ ರಂಗೋಲಿ, ಬಳ್ಳಿ ರಂಗೋಲಿ, ಎರಡೆಳೆ ರಂಗೋಲಿ, ಚಿಕ್ಕದಾದ , ಅತಿದೊಡ್ಡದಾದ ರಂಗೋಲಿ, ಗೆರೆಗಳ ರಂಗೋಲಿ ಹೀಗೆಯೇ ಹಲವಾರು ರೀತಿಯ ರಂಗೋಲಿಗಳನ್ನು ಇಲ್ಲಿ ಬಿಡಿಸುವವಳಿದ್ದೇನೆ. ಜೊತೆಗೆ, ತಾವು ಪ್ರೋತ್ಸಾಹಿಸುವುದಾದರೆ, ಮುಂದಿನ ದಿನಗಳಲ್ಲಿ ಮಕ್ಕಳಿಗಾಗಿ ಪುಟ್ಟ ರಂಗೋಲಿ, ಮಣ್ಣಿನ ಆಟಿಕೆಗಳ ತಯಾರಿಕೆ, ಕನ್ನಡ ವರ್ಣ ಮಾಲೆ ಪಾಠ , ಸಸ್ಯಾಹಾರಿ ಅಡುಗೆ, ಆರೋಗ್ಯ ಸಲಹೆ, ಕೃತಕಹೂಗಳ ತಯಾರಿಕೆ, ವಿವಿಧ ಗಿಡಗಳ ಪೋಷಣೆ, ಹತ್ತಿಬತ್ತಿಗಳು, ಹೂವುಗಳಿಂದ ರಂಗೋಲಿ ಮತ್ತು ಮಹಿಳೆಯರ ಸೌಂದರ್ಯ ಕುರಿತಾದ ಸಲಹೆ ಮುಂತಾದವುಗಳನ್ನೂ ಜೊತೆಗೆ, ಇತರೆ ಕಲೆಗಳನ್ನು ಚಿತ್ರೀಕರಿಸಿ, ತಮ್ಮ ಮುಂದಿರಿಸಲಿದ್ದೇನೆ. ನಿಮ್ಮೆಲ್ಲರ ಸಲಹೆ-ಸೂಚನೆಗಳನ್ನೂ ಸದಾ ನಿರೀಕ್ಷಿಸುತ್ತಿರುತ್ತೇನೆ. 'ನಮ್ಮ ಸಂಸ್ಕೃತಿ, ನಾಡು, ನುಡಿ, ನೆಲ, ಜಲ ಇವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ '. ಅಮೂಲ್ಯವಾದ ಸಮಯವನ್ನು ನೀಡಿರುವ ತಮಗೆ ಧನ್ಯವಾದ.
Thanks for watching 🙏