Channel Avatar

JnanaGamya Prasarana @UCts9DywW5y9MzVKj4G4CErA@youtube.com

268K subscribers - no pronouns :c

This channel is started with the aim to propagate philosophy


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

JnanaGamya Prasarana
Posted 3 months ago

ಲಕ್ಷ್ಮೀಶೋಭಾನೆ : ಜಿಜ್ಞಾಸೆ
ಪೂಜ್ಯ ಶ್ರೀಮದ್ವಾದಿರಾಜಚರಣರು ಅನುಗ್ರಹಿಸಿದ ಲಕ್ಷ್ಮೀಶೋಭಾನ ಪದಗಳಿಗೆ (ಒಟ್ಟು 112 ನುಡಿಗಳು)
ವಿದ್ವಾಂಸರಾದ ಅವಧಾನಿ ವೆಂಕಟೇಶಾಚಾರ್ಯ ಕುಲಕರ್ಣಿಯವರು ಜ್ಞಾನಗಮ್ಯ ಪ್ರಸರಣದಲ್ಲಿ ಅರ್ಥ ಚಿಂತನೆಯನ್ನು ಸಂಗ್ರಹಯೋಗ್ಯವಾದ ರೀತಿಯಲ್ಲಿ ಶುದ್ಧವಾಗಿ ಮಾಡಿಕೊಟ್ಟಿರುತ್ತಾರೆ. ಇದರ ಶ್ರವಣ ಮನನದಿಂದ ನಾವು ಲಕ್ಷ್ಮೀನಾರಾಯಣರ ಮಂಗಲ ಮಹೋತ್ಸವನ್ನು ಕಣ್ಣುತುಂಬಿಕೊಳ್ಳುವಂತಾಯಿತು.

ಲಕ್ಷ್ಮೀಶೋಭಾನೆಯಲ್ಲಿ ಕಂಡುಬರುವ ಜಿಜ್ಞಾಸೆಗೆ ಉತ್ತರವನ್ನು ಬಯಸುವವರು. ನವೆಂಬರ್ 10,2024ರೊಳಗೆ 9449153529 ಈ ಸಂಖ್ಯೆಗೆ ವಾಟ್ಸಪ್ ಮುಖಾಂತರ ಧ್ವನಿ/ಬರಹದ ಮೂಲಕ ಪ್ರಶ್ನೆಯನ್ನು ಕಳುಹಿಸಬಹುದು. ಮತ್ತು ಈ suprajavinyasa@gmail.com ಈ Email ವಿಳಾಸಕ್ಕೆ ಮತ್ತು Youtube CommentBoxನಲ್ಲೂ ಕೂಡ ಪ್ರಶ್ನೆಯನ್ನು ಕಳುಹಿಸಿಬಹುದು.

ನಿಯಮಗಳು:
ಪ್ರಶ್ನೆ ಸಂಕ್ಷಿಪ್ತವಾಗಿರಲಿ. ಪ್ರಶ್ನೆಯೊಂದಿಗೆ ನುಡಿಯ ಸಂಖ್ಯೆಯೂ ಇರಲಿ.
(ಅತ್ಯುತ್ತಮವಾದ ಪ್ರಶ್ನೆ ಎಂದು ವಿದ್ವಾಂಸರಿಗೆ ಅನ್ನಿಸಿದ್ದಲ್ಲಿ ಬಹುಮಾನವೂ ಇದೆ)
ವಿದ್ವಾಂಸರಾದ ಅವಧಾನಿ ವೆಂಕಟೇಶಾಚಾರ್ಯ ಕುಲಕರ್ಣಿಯವರು ಲಕ್ಷ್ಮೀಶೋಭಾನೆಯ ಸಂಚಿಕೆಗಳಲ್ಲಿ ಹಲವು ಗೊಂದಲಗಳನ್ನು ಪರಿಹರಿಸಿದ್ದಾರೆ. ಅದನ್ನು ಗಮನಿಸದೇ ಕೇಳುವ ಪ್ರಶ್ನೆಯನ್ನು ಸ್ವೀಕರಿಸುವುದಿಲ್ಲ.
ಕೇಳುಗರ ಉತ್ತಮವಾದ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವ ಒಂದು ಸಂಚಿಕೆ ಪ್ರಸಾರವಾಗಲಿದೆ.

ಆ ನಂತರ ಲಕ್ಷ್ಮೀಶೋಭಾನೆಯ ಕುರಿತು ಒಂದು ಪರೀಕ್ಷೆಯನ್ನು ನಡೆಸಲಾಗುವುದು.
ಅದರಲ್ಲಿ ಉತ್ತೀರ್ಣರಾದ ಮೊದಲಿಗರಿಗೆ ಬಹುಮಾನವನ್ನು ನೀಡಲಾಗುವುದು.
ಪರೀಕ್ಷೆ ಮತ್ತು ಬಹುಮಾನದ ಮಾಹಿತಿಯನ್ನು ವಿಸ್ತಾರವಾಗಿ ಪ್ರಶ್ನೋತ್ತರ ಮಾಲಿಕೆಯ ಸಂಚಿಕೆಯಲ್ಲಿ ತಿಳಿಸಲಾಗುವುದು. – ಜ್ಞಾನಗಮ್ಯ ಪ್ರಸರಣ.

4 - 0

JnanaGamya Prasarana
Posted 5 months ago

ವಿಷ್ಣುಪಂಜರ ಸ್ತೋತ್ರ : https://youtu.be/01bFR1Q6W1w ಈ ‘ಸ್ತೋತ್ರವನ್ನು ಪಠಿಸುವ ಆಸಕ್ತರಿಗೆ ‘ಪಂಜರ’ದ ಹಾಗೆ ಇದ್ದು, ಸರ್ವಸ್ಥಳದಲ್ಲೂ ಇರುವ ‘ವಿಷ್ಣು’ ರಕ್ಷಣೆ ನೀಡುತ್ತಾನೆ.
ಮುಂಜಾನೆ ದೇಹ ಶುದ್ಧವಾದಂತೆ ಮನಸ್ಸು ಶುದ್ಧವಾಗಬೇಕು.
ಶುದ್ಧವಾದ ಹೃದಯಪೀಠದಲ್ಲಿ ವಿಷ್ಣುವನ್ನು ಆತ್ಮೀಯವಾಗಿ ಈ ಸ್ತುತಿಯಿಂದ ಪ್ರಾರ್ಥಿಸಬೇಕು.
ದಿಕ್ಕು ದಿಕ್ಕುಗಳಲ್ಲಿರುವ ಭಗವಂತ. ಅವನ ಕೈಯಲ್ಲಿರುವ ಆಯುಧಗಳು ಮತ್ತು ಆ ಆಯುಧಗಳ ಅಭಿಮಾನಿ ದೇವರನ್ನು ನೆನೆಯಬೇಕು.
ದಿಕ್ಕಾ ಪಾಲಾದ ಮನಸ್ಸು ಮತ್ತು ಸ್ಥಿತಿಗಳು ಉತ್ತಮ ಗತಿಯನ್ನು ಹೊಂದುವುದರಲ್ಲಿ ಸಂಶಯವಿಲ್ಲ.
ಆಪತ್ತುಗಳು ಪೂರ್ವಜನ್ಮದ ದೋಷದಿಂದ, ಸ್ವಯಂಕೃತ ಅಪರಾಧದಿಂದ, ವಿಶ್ವಾಸದ್ರೋಹಿಗಳ ಕುತಂತ್ರದಿಂದ, ನಮಗರಿಯದ ಹೊತ್ತಿನಲ್ಲಿ ಯಾವ ದಿಕ್ಕಿನಿಂದ ಬರುತ್ತವೋ, ಬಂದೊದಗಿದಿಯೋ ಅರ್ಥವಾಗದೇ ಪ್ರಶ್ನೆ, ಜೌತಿಷ, ಹೋಮ, ಪೂಜೆ, ಹೀಗೆ ನಾನಾ ಗೊಂದಲದಲ್ಲಿ ಪರಿಹರಿಸಿಕೊಳ್ಳಲು ಪ್ರಯತ್ನಿಸುತ್ತಾ ಆಪತ್ತುಗಳಿಗೆ ತುತ್ತಾಗಿಬಿಟ್ಟಿರುತ್ತೇವೆ.
ತಿಳಿದವರೋ ನಾರಾಯಣವರ್ಮವೇ ಮೊದಲಾದ ಮಂತ್ರ-ಸ್ತೋತ್ರ-ಜಪಗಳಿಂದ ತಾಪವನ್ನು ಪರಿಹರಿಸಿಕೊಳ್ಳುತ್ತಾರೆ.
ಸಂಸ್ಕೃತದ ಸ್ಪಷ್ಟತೆಯಿಲ್ಲದವರು, ಸಾಧ್ಯವಾಗದವರು, ಈ ಕನ್ನಡದ ವಿಷ್ಣುಪಂಜರ ಪದವನ್ನು ಹೇಳಿಕೊಂಡರೆ, ಅಥವಾ ಕೇಳಿಸಿಕೊಂಡು ಗುನುಗಿದರೂ ಸಾಕು ! ವಿಶೇಷವಾಗಿ ಸ್ತ್ರೀಧರ್ಮ ವಿಭಾಗದಲ್ಲಿ ಈ ಕೃತಿ ಬಹಳ ಕಾಲದಿಂದ ಶಾಸ್ತ್ರೀಯವಾಗಿ ಮನ್ನಣೆ ಪಡೆದಿದೆ. ಸಿದ್ಧಿದಾಯಕವಾದ ಈ ಸ್ತೋತ್ರ ಹೆಚ್ಚು ಜನರಿಗೆ ಪರಿಚಯವಿರಲಿಲ್ಲ. ಆ ದೃಷ್ಟಿಯಿಂದ ಸಜ್ಜನರಿಗೆ ಅನುಕೂಲವಾಗಲೆಂದು ಜ್ಞಾನಗಮ್ಯ ಪ್ರಸರಣ ಈ ಕೃತಿಯನ್ನು ಪ್ರಸಾರ ಮಾಡುತ್ತಿದೆ. ಈ ಕೃತಿ ಪ್ರಸರಣಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆಗಳು. ವಿಶೇಷವಾಗಿ ಶ್ರೀಮತಿ ಜಯಶ್ರೀಅರವಿಂದರ ಕರ್ಣಾನಂದಕರವಾದ ರಾಗಸಂಯೋಜನೆ ಮತ್ತು ಶ್ರೀಮತಿ ಸೂಕ್ತ ಅರವಿಂದ್ ಇವರ ಮಧುರಧ್ವನಿ ಪರಿಣಾಮಕಾರಿಯಾಗಿದೆ. ಮುಖ್ಯಪ್ರಾಣಾಂತರ್ಗತನಾದ ದೇವರು ಇದರಿಂದ ಸಂತುಷ್ಟನಾಗಲಿ. - ಪ್ರಸನ್ನ ಎಸ್. ಆಚಾರ್ಯ, ಜ್ಞಾನಗಮ್ಯಪ್ರಸರಣ

11 - 0

JnanaGamya Prasarana
Posted 8 months ago

ಜ್ಞಾನವನ್ನು ತುಂಬಿಸಿಕೊಳ್ಳಬೇಕು ಎನ್ನುವ ಜಿಜ್ಞಾಸುಗಳಿಗೆ ಸುಲಭವಾಗಿ ಅರ್ಥಮಾಡಿಸಿಕೊಡುವ ಪುಸ್ತಕದಂತೆ ಇದ್ದವರು ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರು.

ಬೆಂಗಳೂರಿಗೆ ಬಂದಾಗ ಸ್ವಲ್ವವೇ ಸಮಯ ಸಿಕ್ಕರೂ, ಆ ಸಮಯವನ್ನು ವ್ಯರ್ಥ ಮಾಡದೇ ಜ್ಞಾನಗಮ್ಯ ಪ್ರಸರಣಕ್ಕೆ ಬಂದು ತಮ್ಮ ಪ್ರವಚನಕಾರ್ಯ ನಡೆಸಿಕೊಡುತ್ತಿದ್ದರು. 'ಆಚಾರ್ಯ ಮಧ್ವರ ಸಿದ್ಧಾಂತ' ಜಗತ್ತಿನ ಮೂಲೆ ಮೂಲೆಗೂ ತಲುಪಲಿ ಎನ್ನುವ ಅವರ ಕಳಕಳಿಗೆ ಎಂದೂ ಬೆಲೆ ಕಟ್ಟಲಾಗದು.

ಮೊನ್ನೆ ದಿನ 13.06.2024(ಗುರುವಾರ, ಸಪ್ತಮಿ)ರಂದು ಬೆಳಿಗ್ಗೆ 3 ಸಂಚಿಕೆಗಳ ಪ್ರವಚನ ಜ್ಞಾನಗಮ್ಯ ಪ್ರಸರಣದಲ್ಲಿ ನಡೆಯಿತು. (ಶೀಘ್ರದಲ್ಲೇ ಆ 3 ಸಂಚಿಕೆಗಳು ಪ್ರಸಾರವಾಗಲಿದೆ. ಉಳಿದಂತೆ ಅವರು ಈ ಹಿಂದೆ ಮಾಡಿಕೊಟ್ಟ ಎಲ್ಲ ಆ ಸಂಚಿಕೆಗಳು ಕ್ರಮೇಣ ಪ್ರಸಾರವಾಗಲಿದೆ.)

ಆಚಾರ್ಯರು ಒಂದು ಅದ್ಭುತ ಚೇತನ. ತುಂಬಿದ ಗಣಿ, ಅವರ ಸೌಜನ್ಯ ಸದ್ಗುಣಗಳ ವರ್ಣನೆಗೆ ಶಬ್ಧಭಂಡಾರವನ್ನು ಹುಡುಕಬೇಕಾಗುತ್ತದೆ. ಮುಖ್ಯಪ್ರಾಣ-ವೇದವ್ಯಾಸರ ಸೇವೆಯನ್ನು ಮಾಡಿದವರು.
ನಿಜಕ್ಕೂ ಒಂದು ಅಮೂಲ್ಯ ರತ್ನವನ್ನು ಕಳೆದುಕೊಂಡು ಬಿಟ್ಟೆವು...
ಗಿಣಿಯು ಪಂಜರದೊಳಿಲ್ಲ ಶ್ರೀರಾಮ..
ತತ್ತ್ವಜ್ಞಾನವ ನುಡಿಯುತ್ತಿದ್ದ ಗಿಣಿ ಇನ್ನಿಲ್ಲ !!


-ಪ್ರಸನ್ನ ಎಸ್. ಆಚಾರ್ಯ, ಜ್ಞಾನಗಮ್ಯ ಪ್ರಸರಣ.

271 - 25

JnanaGamya Prasarana
Posted 1 year ago

Shri Rama (Prana Prathistapana at Shri Rama Janma Bhoomi, Ayodhya - 22 02 2024
)
Ram Mandir Pran Pratishtha: The Great Kritis of Sri Rama | Nagumomu | Vid Thanmayee Krishnamurthy
▶Link : https://youtu.be/eLG2n8dDpUM

ಅಯೋಧ್ಯೆಗೆ ರಾಮ ಬರುವ ಸಂಭ್ರಮ || ರಾಮ ಎಂಬುವ ಎರಡು ಅಕ್ಷರದ ಮಹಿಮೆ || Rama Embuva Eradu Aksharada Mahime ▶ Link : https://youtu.be/H_hpA-hf2LM

ಅಯೋಧ್ಯೆಯ ರಾಮ ಪ್ರಾಣಪ್ರತಿಷ್ಠೆಯಲ್ಲಿ ನಮ್ಮಅನುಸಂಧಾನ ಹೇಗಿರಬೇಕು ? | Ayodhya Rama Prana Pratishteya Vaibhava Anusandhana ▶Link : https://youtu.be/hA04npuZmSw
Ram Bhajan - Sri Rama Jaya Rama Jaya Jaya Rama | RAM LALA | Jai Shri Ram ▶Link : https://youtu.be/I_YIS9fG6aA

ಅಯೋಧ್ಯೆಗೆ ಮರಳಿ ಬಂದ ಶ್ರೀರಾಮನ ಗುಣಚಿಂತನೆ | Ayodhyadhisha Sri Ramana Gunachintane | Rama Prana Pratishte | ▶Link : https://youtu.be/_0B7WM9ANzg

1.1K - 15

JnanaGamya Prasarana
Posted 1 year ago

ಶ್ರೀ ಉಪೇಂದ್ರತೀರ್ಥಸಂಸ್ಥಾನಾಧಿಪತಿಗಳಾದ
(ಶ್ರೀಪುತ್ತಿಗೆ ಮಠ - ಉಡುಪಿ)
ಪರಮಪೂಜ್ಯ ಶ್ರೀ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು
ದಿನಾಂಕ 28.08.2023 ರಂದು
ಜ್ಞಾನಗಮ್ಯ ಪ್ರಸರಣದ ಚಿತ್ರೀಕರಣ ಕೇಂದ್ರಕ್ಕೆ
ಮೊದಲ ಬಾರಿಗೆ ಆಗಮಿಸಿ ಅನುಗ್ರಹ ಸಂದೇಶ ನೀಡಿ ಪಾವನಗೊಳಿಸಿದ ಕ್ಷಣ.

Title : Shri Shri Upendra Theertha Moola Maha Samsthanam
(Direct Lineage of Shri Jagadguru Madhwacharya)
Guru Parampara of Shri Puthige Matha
ಶ್ರೀ ಶ್ರೀಉಪೇಂದ್ರತೀರ್ಥಸಂಸ್ಥಾನಮ್
(ಜಗದ್ಗುರು ಶ್ರೀ ಶ್ರೀಮಧ್ವಾಚಾರ್ಯರ ಸಾಕ್ಷತ್ ಪರಂಪರೆ)
“ಉಡುಪಿ ಶ್ರೀ ಪುತ್ತಿಗೆ ಮಠದ ಗುರುಪರಂಪರೆ”
Discourses by : H. H. Shri Sugunendratheertha Swamiji of Sri Puthige Matha
ಗುರುಸ್ಮರಣೆ : ಪರಮಪೂಜ್ಯ ಶ್ರೀ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು
Subject : Guru Parampara / ಗುರು ಪರಂಪರೆ

▶Link share : https://youtu.be/X1TLKEnDPSA

338 - 9

JnanaGamya Prasarana
Posted 1 year ago

ಅಧ್ಯಾತ್ಮ ಬಂಧುಗಳೇ,

ಕಳೆದ 6 ವರ್ಷಗಳಿಂದ ಜ್ಞಾನಗಮ್ಯ ಪ್ರಸರಣ ತನ್ನದೇ ಆದ ಶೈಲಿಯಲ್ಲಿ ನಡೆದು ಬರುತ್ತಿದೆ.
ಇದೀಗ ಜ್ಞಾನಗಮ್ಯ ಪ್ರಸರಣದಲ್ಲಿ 2 ಲಕ್ಷ ಚಂದಾದಾರರು...

ಆಚಾರ್ಯ ಮಧ್ವರ ತತ್ವಜ್ಞಾನದ ನೆಲೆಯಲ್ಲಿ ಆದ ಮೊದಲ ದಾಖಲೆಯಿದು.
ಪ್ರತಿ ಯಶಸ್ಸಿನ ಘಟ್ಟದಲ್ಲೂ ಹೇಳುವ ಮಾತನ್ನು ಮತ್ತೊಮ್ಮೆ ಪುನರುಚ್ಚರಿಸುತ್ತಿದ್ದೇವೆ..
ಹರಿದಾಸರ ಪದ್ಯ - ಹರಿಕಥೆ - ಸ್ತೋತ್ರ - ಉಪನ್ಯಾಸಗಳ ಧ್ವನಿಮುದ್ರಣವನ್ನು ಕೊಟ್ಟಂತಹ ಪ್ರಸನ್ನಸಂಸ್ಥೆಗೂ,
ಇದೇ ತೆರನಾಗಿ ಸಹಕರಿಸಿದ ಪ್ರಣವಸಂಸ್ಥೆಗೂ,
ಜ್ಞಾನಗಮ್ಯ ಪ್ರಸರಣದ ಸತ್ಕಾರ್ಯವನ್ನು ಮೆಚ್ಚಿ ಈವರೆಗೆ ಅನುಗ್ರಹಿಸಿರುವ ಪೀಠಾಧಿಪತಿಗಳಿಗೂ,
ಮಧ್ವಸಿದ್ಧಾಂತ ಯತಾರ್ಥವಾಗಿ ಇನ್ನಷ್ಟು ಗಟ್ಟಿಗೊಳ್ಳಬೇಕು ಎನ್ನುವ ದೃಷ್ಟಿಯಿಂದ ಸಹಕರಿಸುತ್ತಿರುವ ವಿದ್ವಾಂಸರಿಗೂ,
ಹರಿದಾಸರ ಹಾಡುಗಳನ್ನು ಹಾಡುತ್ತಿರುವ ಗಾಯಕವೃಂದಕ್ಕೂ,
ತಾಂತ್ರಿಕವಾಗಿ ನಿಂತಿರುವ ಸಂಯೋಜಕರು, ತಂತ್ರಜ್ಞರು, ಸಲಹೆಗಾರರು, ಅಭಿಮಾನಿಗಳು ಇವರೆಲ್ಲರಿಗೂ,
ಯೂಟ್ಯೂಬಿನ ಮುಖಾಂತರ ನೋಡುತ್ತಿರುವ ವೀಕ್ಷಕವರ್ಗಕ್ಕೂ, ಚಂದಾದಾರರಿಗೂ,
ಕಾರ್ಯಕ್ರಮಕ್ಕೆ ಪ್ರಾಯೋಜಕರಾಗಿ ಸೇವೆ ಸಲ್ಲಿಸುತ್ತಿರುವವರಿಗೂ,
ಹಾಗು ಪ್ರಸರಣಕ್ಕೆ ಪೋಷಕರಾಗಿರುವ ಮಹಾನುಭಾವರಿಗೂ,
ಮತ್ತೆ ಮತ್ತೆ ವಂದನೆಗಳು.

ಜ್ಞಾನಗಮ್ಯದ ಮುಖ್ಯಪ್ರಾಣ-ವೇದವ್ಯಾಸರ ಅನುಗ್ರಹದ ರಕ್ಷೆ ಎಲ್ಲರನ್ನೂ ಕಾಪಿಡಲಿ.

“ಯಥಾರ್ಥವಾದ ಶುದ್ಧಜ್ಞಾನವೇ ಆನಂದಮಯವಾದ ಬದುಕು”

ಧನ್ಯವಾದಗಳೊಂದಿಗೆ..
ಜ್ಞಾನಗಮ್ಯ ಪ್ರಸರಣ.

360 - 23

JnanaGamya Prasarana
Posted 2 years ago

ಶ್ರೀವಾದಿರಾಜಮುನಿ ಕಂಡ ಲಕ್ಷ್ಮೀಶೋಭನಪದ - ಪದಗಳ ಅರ್ಥ, ಸಾರ ಚಿಂತನೆ,
ಇದೀಗ ಪಾಠರೂಪವಾಗಿ, ಪ್ರವಚನವಾಗಿ ನಿಮ್ಮ ಮುಂದೆ
ಶ್ರೀವಾದಿರಾಜ ಅನುಗ್ರಹದಿಂದ, ಶ್ರೀಲಕ್ಷ್ಮೀನಾರಾಯಣರ ಕೃಪಕಟಾಕ್ಷದಿಂದ
ಜ್ಞಾನಗಮ್ಯ ಪ್ರಸರಣದಲ್ಲಿ ಪ್ರಸಾರವಾಗಲಿದೆ.
ಶ್ರೀವಾದಿರಾಜರ ವಿಶೇಷ ಅನುಗ್ರಹಕ್ಕೆ ಪಾತ್ರರಾದ ವಿದ್ವಾನ್ ಅವಧಾನಿ ವೆಂಕಟೇಶಕುಲಕರ್ಣಿ ಆಚಾರ್ಯರು ನಡೆಸಿಕೊಡಲಿದ್ದಾರೆ.
ಪ್ರತಿವಾರ ಪ್ರಸಾರವಾಗಲಿರುವ ಈ ಸಂಚಿಕೆಯನ್ನು
JnanaGamya Prasarana - youtube url linkಗಳ ಮುಖಾಂತರ ನೋಡುವ ಸಹೃದಯರಿಂದ ಮಾತ್ರ
ಈ ಸಂಚಿಕೆಗಳ ನಿರ್ಮಾಣದ ಶ್ರಮ ಸಾರ್ಥಕವಾಗುವುದು.
ನಮ್ಮ ಶ್ರಮವನ್ನು ಸಾರ್ಥಕಗೊಳಿಸುವ ಸರ್ವರಿಗೂ ಮುಖ್ಯಪ್ರಾಣ ವೇದವ್ಯಾಸರ ಅನುಗ್ರಹವಿರಲಿ.
ನಮ್ಮನ್ನು ಈ ವಿಷಯದಲ್ಲಿ ಇನ್ನಷ್ಟು ತೊಡಗಿಕೊಳ್ಳುವ ಹಾಗೆ ಮಾಡಲಿ.- (ಸಂ)

⦿ Playlists ▷Link to "Lakshmi Shobhane : Patha-Pravachana" ▷

621 - 14

JnanaGamya Prasarana
Posted 2 years ago

ಕತ್ತಲು ಒಂದು ಬದುಕು
ಇಲ್ಲಿ ಚಂದ್ರನೂ ಬಂದು ಹೋಗುತ್ತಿರುತ್ತಾನೆ.
ಸೂರ್ಯನೂ ಬಂದು ಹೋಗುತ್ತಿರುತ್ತಾನೆ.
ಇದರ ನಡುವೆ ದೀಪವು ಉರಿಯುತ್ತದೆ.. ಆರುತ್ತದೆ...
ಬದುಕಿನ ಸಾರ್ಥಕ್ಯಕ್ಕೆ
ಜ್ಞಾನದ ಮತ್ತು ಸಂತಸದ ದೀಪ ನಿರಂತರ ಹಚ್ಚಬೇಕು.
ಈ ದೀಪದಲ್ಲಿ ನಾವೂ ಬದುಕೋಣ...
ನಮ್ಮವರನ್ನೂ ಬದುಕಿಸೋಣ...
ನಮ್ಮ ಪೀಳಿಗೆಗೂ ಈ ಬೆಳಕಿರಲೆಂದು ಪ್ರಾರ್ಥಿಸೋಣ...
ಬೆಳಕಿನ ಅರಿವು, ಕತ್ತಲಿನ ಅರಿವು ಇದ್ದಾಗ ಮಾತ್ರ ಈ
ಬದುಕಿಗೆ ಆನಂದದ ಹಣತೆ ಸುಖದದಾರಿಯನ್ನು ತೋರಿಸುತ್ತದೆ.

ಸಮಸ್ತರಿಗೂ ದೀಪಾವಳಿಯ ಶುಭಾಶಯಗಳು
- ಪ್ರಸನ್ನ ಎಸ್. ಆಚಾರ್ಯ, ಜ್ಞಾನಗಮ್ಯ ಪ್ರಸರಣ.

173 - 2

JnanaGamya Prasarana
Posted 2 years ago

ಪ್ರೊ. ಕೆ. ಹಯವದನ ಪುರಾಣಿಕ್
-----------------------------
ತತ್ವಜ್ಞಾನವೆಂಬ ಕ್ಷೀರಸಮುದ್ರದಲ್ಲಿ ವಿಹರಿಸುವ ಜಿಜ್ಞಾಸುಗಳಿಗೆ,
ಜಯವನ್ನು ತಂದುಕೊಟ್ಟವರು ನಮ್ಮ ಶ್ರೀ ಹಯವದನ ಪುರಾಣಿಕರು.
ನನಗೆ,
ಬರಹದ ಗಾಂಭೀರ್ಯವನ್ನು, ವಸ್ತುನಿಷ್ಠವಾಗಿ ವಿಷಯ ಸಂಶೋಧಿಸುವ ರೀತಿಯನ್ನು, ತಿಳಿಸಿಕೊಟ್ಟ ಗುರುಗಳು.
ಅರ್ಥವಾಗದೇ ಉಳಿದೇ ಹೋಗಿದ್ದ ಎಷ್ಟೋ ವಿಚಾರಗಳನ್ನು ಒಂದೆರಡೆ ಮಾತುಗಳಲ್ಲಿ,
ವಿಸ್ತಾರವಾಗಿ ಅರ್ಥವಾಗುವಂತೆ ಹೇಳಿಕೊಡುತ್ತಿದ್ದ ದರ್ಶನಕಾರರು ಹೌದು.
ನನ್ನ ಸಾಕಷ್ಟು ಕಿರುಚಿತ್ರಗಳಿಗೆ, ಧ್ವನಿಸುರಳಿಗಳಿಗೆ ಸಾಹಿತ್ಯ ಬರೆದುಕೊಟ್ಟವರು.
ಧ್ವನಿಮುದ್ರಣ ಕೇಂದ್ರಗಳಿಗೆ ಗಂಟೆಗಟ್ಟಲೇ ಬಂದು, ಸಂಸ್ಕೃತದ ಸ್ಪಷ್ಟತೆಯನ್ನು ಗಾಯಕರಿಗೆ ತಿಳಿಸಿ-ತಿದ್ದಿದ ಮಹಾನುಭಾವರು.
ಜ್ಞಾನಗಮ್ಯಪ್ರಕಾಶನದ ಪುಸ್ತಕಗಳಿಗೆ ಸಂಪಾದಕರು ಆಗಿದ್ದವರು.
ಅವರ ಮನೆಗೆ ಹೋದಾಗ ಅವರು ನೀಡುತ್ತಿದ್ದ ಆತಿಥ್ಯವೇ ಒಂದು ಅವಿಸ್ಮರಣೀಯ !
ಮಾತಿಗಿಂತಲೂ ಬರಹವನ್ನೇ ಬದುಕು ಮಾಡಿಕೊಂಡವರು ! ಅದರ ನಡುವೆಯೂ ಅಮೂಲ್ಯವಾದ ಮಹಾಭಾರತದ ಒಂದಷ್ಟು ವಿಚಾರಗಳನ್ನು ಚಿತ್ರೀಕರಿಸುವಲ್ಲಿ ಸಹಕರಿಸಿದವರು.
ಕೆಲವು ಮರಗಳಿಗೆ ನೀರು ಹಾಕಿದರೆ ಮಾತ್ರ ಫಲ ಕೊಡುತ್ತದೆ. ಕೆಲವು ಮರಗಳು ನಮ್ಮಿಂದ ಏನು ಪಡೆಯದಿದ್ದರೂ ನಮಗೆ ಫಲಕೊಡುತ್ತದೆ. ಹಾಗೇ ಪುರಾಣಿಕರು ನನ್ನಿಂದ ಏನೂ ಪಡೆಯದೇ ಫಲ ಕೊಟ್ಟವರು. ತತ್ವಜ್ಞಾನದ ದಾರಿಯಲ್ಲಿ ನನ್ನ ಇಂದಿನ ಪಯಣಕ್ಕೆ ಅಂದೇ ಜ್ಯೋತಿ ಬೆಳಗಿಸಿಬಿಟ್ಟರು !
ಕೆಲವರು ಹೇಳುವುದುಂಟು; ‘ಹರಿಪಾದ ಸೇರಿದರು - ವಿಷಾದವಾಯಿತು’ ಎಂದು ! ಹರಿಪಾದವನ್ನು ಸೇರಿದ್ದಾರೆ ಎನ್ನುವ ಬಲವಾದ ನಂಬಿಕೆಯಿದ್ದಲ್ಲಿ ವಿಷಾದವೇಕೆ ? ಅವರ ಸತ್ಕರ್ಮಗಳಿಗೆ ಹರಿಪಾದದ ಸುಖ ಸಿಗುವುದರಲ್ಲಿ ಸಂಶಯವಿಲ್ಲ.
ಇನ್ನೆನ್ನು ಹೇಳಲಿ ಅವರ ಬಗ್ಗೆ ? ಅವರ ನಿಷ್ಕಲ್ಮಶವಾದ ಪ್ರೀತಿಯ ಬಂಧುತ್ವಕ್ಕೆ ! ದೂರದ ಸಂಬಂಧಿಕರಾಗಿದ್ದರೂ ಹತ್ತಿರದ ಸಂಬಂಧವಿತ್ತು !
ನನ್ನ “ಶ್ರೀರಾಮನಾಥಪುರ ಕ್ಷೇತ್ರ ಮಹಾತ್ಮೆ’ಯ ಸಂಶೋಧಿತ ಪುಸ್ತಕದ ಮುನ್ನುಡಿಯಲ್ಲಿ ಅವರ ಬಗ್ಗೆ ಹೀಗೆ ಬರೆದಿದ್ದೆ;
ಈ ಕೃತಿರಚನೆಯ ಯಜ್ಞಕ್ಕೆ ಪುರೋಹಿತತಾಗಿ ಕಾಲಕಾಲಕ್ಕೆ ನನಗೆ ಮಾರ್ಗದರ್ಶನವನ್ನು ಮಾಡಿರುವ ಬೆಂಗಳೂರಿನ ಪೂರ್ಣಪ್ರಜ್ಞವಿದ್ಯಾಪೀಠದ ಪ್ರಾಂಶುಪಾಲರಾದ ವೇದಮೂರ್ತಿ ವಿದ್ವಾನ್ ಶ್ರೀ ಕೆ. ಹಯವದನ ಪುರಾಣಿಕರು, ಎಂ. ಎ. ಅವರ ಅನನ್ಯ ಸಹೃದಯತೆ, ಸಹಕಾರ ಮನೋಭಾವನೆಗೆ ನಾನು ಆಜೀವ ಅಭಾರಿ.
--------- ✒️ಪ್ರಸನ್ನ ಎಸ್. ಆಚಾರ್ಯ, ಜ್ಞಾನಗಮ್ಯ ಪ್ರಸರಣ.
►Prof. K Hayavadana Puranik : Playlists▷ shorturl.at/luX14

346 - 10

JnanaGamya Prasarana
Posted 2 years ago

263 - 1