ಮೂಲತಃ ನಾನೊಬ್ಬ ಪತ್ರಕರ್ತ. ಚಿಕ್ಕವನಿರುವಾಗಲೆ ಅಗ್ನಿ ಅಂಕುರ ಎಂಬ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿದ್ದೆ. ಗೌರಿ ಲಂಕೇಶ್, ಪ್ರಪಂಚ,ಸುದ್ದಿ ಸಂಗಾತಿ, ಡಾ.ಪಾಪು ಅವರ ಪ್ರಪಂಚ ಪತ್ರಿಕೆಗಳಿಗೆ ಬರೆದಿರುವೆ. ಸುಮಾರು ೨೫ ಪುಸ್ತಕ ಬರೆದಿರುವೆ.
ನನ್ನ ತಂದೆ ಲಿಂಗಣ್ಣ ಸತ್ಯಂಪೇಟೆಯೆ ನನಗೆ ಗುರು. ಅಪ್ಪನ ಹವ್ಯಾಸ, ಕೆಲಸಗಳ ನಡುವೆ ಹಕನಾಕ ಆದವನು ನಾನು. ಓದು, ಬರವಣಿಗೆ ಜೊತೆ ಜೊತೆಗೆ ವಚನಕಾರರಾದ ಬಸವಾದಿ ಶರಣರ ಬಂಡಾಯ ಧರ್ಮದ ಬಗ್ಗೆ ನನಗೆ ತೀವ್ರವಾದ ಕುತೂಹಲ ಮತ್ತು ಹೆಮ್ಮೆ. ಶರಣ ಬಳಿವಿಡಿದು ಬಂದವರು ನಾವು ಎಂಬ ಹೆಮ್ಮೆ. ಶರಣರ ಚಿಂತನೆಗಳು ಚೆತೋಹಾರಿ. ಅವನ್ನು ಹೇಳಬೇಕೆಂಬುದೆ ನನ್ನ ಮನದಾಸೆ.
ನಿಮ್ಮಲ್ಲಿ ಯಾವುದೆ ರೀತಿಯ ಪ್ರಶ್ನೆಗಳಿದ್ದರೆ. ತಾವು satyampet1968@gmail.com ಗೆ ಕಳಿಸಬಹುದು