in the future - u will be able to do some more stuff here,,,!! like pat catgirl- i mean um yeah... for now u can only see others's posts :c
🌟 200K Subscribers! Thank You! 🌟
We are thrilled to announce that Dr. Vinayak Hebbar's Authentic Ayurveda has reached an incredible milestone of 200,000 subscribers! 🙏✨
This achievement wouldn’t have been possible without the immense love, support, and trust you’ve shown in our journey to spread authentic Ayurveda knowledge. 💚
From ancient wisdom to modern health tips, your engagement inspires us to continue sharing valuable content for a healthier, balanced life. 🌿💫
Let’s keep growing and healing together! 🌟
Stay tuned for more insightful videos, and don’t forget to like, share, and subscribe!
#200KSubscribers #ThankYou #AuthenticAyurveda #AyurvedaForLife #DrVinayakHebbar #HealthyLiving #NaturalHealing
149 - 18
ನಿನ್ನೆ ಧನ್ವಂತರಿ ಜಯಂತಿಯಂದು ನನ್ನ ಹೊಸ ಪುಟ್ಟ ಪುಸ್ತಕ ಬಿಡುಗಡೆ ಆಯಿತು. ಆರೋಗ್ಯಕ್ಕಾಗಿ ದಿನಚರಿ, ಆಹಾರ ಸೇವನಾ ವಿಧಾನ, ಉಪವಾಸ, ಸತ್ಸಂತಾನಕ್ಕೆ ಸರಳ ಸೂತ್ರಗಳನ್ನು ಈ ಪುಸ್ತಕ ಹೊಂದಿದೆ.
ನನ್ನ ಎಲ್ಲಾ ವೀಡಿಯೊಗಳನ್ನು ನೋಡುವವರಿಗೆ ಬಹುತೇಕ ಅದೇ ವಿಷಯ ಹೊಂದಿರುವ ಈ ಪುಸ್ತಕದ ಅವಶ್ಯಕತೆ ಇದೆಯೆಂದು ನನಗನ್ನಿಸುವುದಿಲ್ಲ. ಆದರೆ ತುಂಬಾ ವಿಷಯಗಳು ಒಂದೇ ಕಡೆ ಸಿಗುವ ಕಾರಣ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಗಿಫ್ಟ್ ಕೊಡಲೂ ಯೋಗ್ಯವೆಂದು ನನಗನ್ನಿಸುತ್ತದೆ.
ಪುಸ್ತಕಕ್ಕಾಗಿ 8660939261 ಗೆ ಸಂಪರ್ಕಿಸಬಹುದು.
500 - 27
ಲಾಭದಲ್ಲಿ ಬಹುದೊಡ್ಡ ಪಾಲನ್ನು ದಾನ ಮಾಡುತ್ತಿದ್ದ ಅಪರೂಪದ ವ್ಯಕ್ತಿ ರತನ್ ಟಾಟಾ. ಅಷ್ಟಾಂಗ ಹೃದಯದ ಸೂತ್ರಸ್ಥಾನದ ಐದನೆಯ ಅಧ್ಯಾಯದ ಒಂದು ಶ್ಲೋಕದಲ್ಲಿ ಏನೇನು ಮಾಡಿದರೆ ರೋಗಗಳು ಬರುವುದಿಲ್ಲ ಎಂದು ಹೇಳುವಾಗ "ದಾತಾ" ಎಂದೂ ಹೇಳುತ್ತಾರೆ. ಅಂದರೆ ಮನಃಪೂರ್ವಕವಾಗಿ, ಪ್ರತಿಫಲ ಅಪೇಕ್ಷೆ ಇಲ್ಲದೇ (ಪುಣ್ಯ ಸಿಗಲೆಂದು, ಪಾಪ ಕಳೆಯಲೆಂದು ಅಥವಾ ದೊಡ್ಡ ಹೆಸರು ಬರಲೆಂಬ ಯೋಚನೆ ಇಲ್ಲದೇ) ಮಾಡಿದ ದಾನದಿಂದ ನಮ್ಮೊಳಗೆ ಧನಾತ್ಮಕ ಶಕ್ತಿಯ ಮತ್ತು ಮಾನಸಿಕ ಶಕ್ತಿಯ ವೃದ್ಧಿಯಾಗಿ ಆರೋಗ್ಯ ಹೆಚ್ಚುತ್ತದೆ.
ನಾನು ಯಾರಿಂದ, ಎಲ್ಲಿ, ಹೇಗೆ, ಏನನ್ನು ಪಡೆದುಕೊಳ್ಳಬಹುದು ಎಂಬುದನ್ನಷ್ಟೇ ಯೋಚಿಸದೇ ಯಾರಿಗೆ, ಹೇಗೆ ಕೊಡಬಹುದು ಎಂಬುದನ್ನು ಕೂಡಾ ಚಿಂತಿಸೋಣ.
541 - 7
ಚೀಯರ್ಸ್ - ಆಯುರ್ವೇದಿಕ್ ಮದ್ಯವೂ ಬಂತು
ಆಯುರ್ವೇದಿಕ್ ಶಾಂಪೂ, ಸೋಪ್, ಟೂತ್ ಪೇಸ್ಟ್, ಐಸ್ ಕ್ರೀಮ್ ಗಳನ್ನೆಲ್ಲ ನೋಡಿ ನಾವೆಲ್ಲಾ ತಮಾಷೆ ಮಾಡುತ್ತಿದ್ದೆವು - ಮುಂದೊಂದು ದಿನ ಆಯುರ್ವೇದಿಕ್ ಗುಟಖಾ, ಸರಾಯಿ, ಸಿಗರೇಟ್ ಗಳು ಬರುತ್ತವೆ ಎಂದು. ಅದು ಈಗ ನಿಜವಾಗಿದೆ. ಆದರೆ ಇಲ್ಲಿ ಒಂದಿಷ್ಟು ವಿಷಯಗಳನ್ನು ತಿಳಿದುಕೊಳ್ಳಬೇಕು.
ಇವು ನಿಜವಾಗಿಯೂ ಆಯುರ್ವೇದವೇ?
ಒಂದು ಬಕೆಟ್ ಸಮುದ್ರದ ನೀರಿಗೆ ಒಂದು ಚಮಚ ನದಿಯ ನೀರನ್ನು ಹಾಕಿ ಇದು ಸಿಹಿ ನೀರು ಎಂದರೆ ಅದು ನದಿಯ ನೀರಾಗಲು ಸಾಧ್ಯವೇ? ಅದೇ ರೀತಿ ಸೋಪ್, ಶಾಂಪು, ಫೇಸ್ ವಾಶ್ ಗಳಲ್ಲಿ (ಈಗ ಸರಾಯಿಯಲ್ಲಿ ಕೂಡ) 5 – 10% ಗಿಡಮೂಲಿಕೆಗಳನ್ನು ಹಾಕಿದರೆ ಅದು ಆಯುರ್ವೇದಿಕ್ ಆಗಲು ಸಾಧ್ಯವಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.
ಇದರಿಂದ ಏನಾಗುತ್ತಿದೆ?
ಆಯುರ್ವೇದಿಕ್ ಮದ್ಯ ಎಂದು ಮಾರಾಟ ಮಾಡುತ್ತಿರುವವರು ನಾವು ತಯಾರು ಮಾಡಿರುವ ಮದ್ಯ ಉಳಿದ ಮಧ್ಯಗಳಂತೆಯೇ ಮತ್ತನ್ನು ಕೊಡುತ್ತದೆ; ಆದರೆ ನಾವು ರಿಸರ್ಚ್ ಮಾಡಿ ಆಯುರ್ವೇದಿಕ್ ಮದ್ಯವನ್ನು ತಯಾರಿಸಿದ್ದೇವೆ ಎನ್ನುತ್ತಿದ್ದಾರೆ. ಯಾವ ಮದ್ಯವೇ ಆದರೂ ದೇಹದಲ್ಲಿ ಮಾಡಬೇಕಾದ ಕೆಟ್ಟ ಪರಿಣಾಮವನ್ನು ಉಂಟು ಮಾಡಿಯೇ ಮಾಡುತ್ತದೆ. ಎಲ್ಲೋ ಚೂರು ಆಯುರ್ವೇದ ಗಿಡಮೂಲಿಕೆಗಳನ್ನು ಹಾಕಿ ಆಯುರ್ವೇದ ಉತ್ಪನ್ನವೆನ್ನುವುದು ತಪ್ಪು. ಇಂತಹ ವಸ್ತುಗಳಿಗೆ ಆಯುರ್ವೇದದ ಹೆಸರನ್ನು ಬಳಸುವ ಕಾರಣದಿಂದ ಹೆಸರು ಹಾಳಾಗುವುದು ಮಾತ್ರ ಆಯುರ್ವೇದದ್ದು.
ನಾವೇನು ಮಾಡಬೇಕು?
ಇನ್ನು ಸ್ವಲ್ಪ ದಿನಗಳಲ್ಲಿ ನಮ್ಮ ಗುಟಖಾದಲ್ಲಿ ತುಳಸಿ, ಅಶ್ವಗಂಧ ಹಾಕಿದ್ದೇವೆ ಹಾಗಾಗಿ ಇದು ಆಯುರ್ವೇದಿಕ್ ಗುಟ್ಖಾ ಇಂದು ಮಾರಾಟ ಮಾಡಬಹುದು. ಹಾಗಾಗಿ ನಾವೆಲ್ಲಾ ಆಯುರ್ವೇದಿಕ್ ಎಂಬ ಬರಹವನ್ನು ನೋಡಿ ಟೀ ಪುಡಿ, ಫೇಸ್ ವಾಶ್ ಫೇಸ್ ಕ್ರೀಮ್, ಬಿಸ್ಕಿಟ್ಸ್ ಮುಂತಾದವುಗಳನ್ನು ಖರೀದಿಸುವುದನ್ನು ಬಿಡಬೇಕು. ಆ ಉತ್ಪನ್ನದಲ್ಲಿ ಎಷ್ಟು ಪ್ರಮಾಣದಲ್ಲಿ ಆಯುರ್ವೇದ ಗಿಡಮೂಲಿಕೆಗಳು ಇವೆ ಎಂಬುದನ್ನು ನೋಡಬೇಕು. ಉದಾಹರಣೆಗೆ, ಆಯುರ್ವೇದಿಕ್ ಟೀ ಪುಡಿಯಲ್ಲಿ ಅಶ್ವಗಂಧ, ತುಳಸಿ, ಶುಂಠಿ ಎಲ್ಲಾ ಸೇರಿ ಇರುವುದು 0.2% ಮಾತ್ರ. ಅಂದರೆ 1 ಕೆಜಿ ಟೀ ಪುಡಿಯಲ್ಲಿ ಆಯುರ್ವೇದ ಗಿಡಮೂಲಿಕೆಗಳು ಇರುವುದು 2 ಗ್ರಾಂನಷ್ಟು ಮಾತ್ರ.
186 - 15
ವಿಜೇತವ್ಯಾ ಲಂಕಾ ಚರಣ ತರಣೀಯೋ ಜಲನಿಧಿಃ |
ವಿಪಕ್ಷಃ ಪೌಲಸ್ತ್ಯೋ ರಣಭುವಿ ಸಹಾಯಾಶ್ಚ ಕಪಯಃ ||
ತಥಾಪ್ಯೇಕೋ ರಾಮ ಸಕಲ ಮೇವಾಧೀದ್ರಾಕ್ಷಸಕುಲಂ |
ಕ್ರಿಯಾಸಿದ್ಡಿಃ ಸತ್ವಂ ವಸತಿ ಮಹತಾಂ ನೋಪಕರಣೇ ||
ಇದರ ಅರ್ಥವನ್ನು ಆಮೇಲೆ ನೋಡೋಣ. ನನಗಾದ ಒಂದು ಅನುಭವವನ್ನು ಮೊದಲು ಹಂಚಿಕೊಳ್ಳುತ್ತೇನೆ. ಒಮ್ಮೆ ನಮ್ಮ ಗುರುಗಳ ಹತ್ತಿರ ತಾಯಿಯೊಬ್ಬಳು ಕತ್ತು ಒಂದು ಕಡೆ ಓರೆಯಾಗಿರುವ 5 ವರ್ಷದ ಮಗುವನ್ನು ಕರೆದುಕೊಂಡು ಬಂದಳು. ಸರ್ಜರಿ ಆಗಲೇಬೇಕೆಂದು ವೈದ್ಯರುಗಳೆಲ್ಲ ಹೇಳಿದ್ದಾರೆ ಎಂದಳು. (ಹುಟ್ಟಿನಿಂದಲೇ ಇರುವ ಈ ಸಮಸ್ಯೆಗೆ Congenital Muscular Torticollis ಎನ್ನುತ್ತಾರೆ.) ನನ್ನ ಗುರುಗಳು “ಅಡ್ಮಿಟ್ ಆಗಿ; ನಸ್ಯ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು” ಎಂದರು. ಆಗ ನನಗೆ ಇದು ಗುಣವಾಗಲು ಸಾಧ್ಯವೇ? ಸುಮ್ಮನೆ ಅವರ ಹಣ ವ್ಯಯವಲ್ಲವೇ? ಎಂದು ಅನುಮಾನ ಬಂದಿತ್ತು. ಆದರೆ ಚಿಕಿತ್ಸೆ ಮುಗಿಸಿ ಮನೆಗೆ ಹೋದವರು ಮತ್ತೆ ಪುನಃ ಭೇಟಿಗೆ ಬರುವಾಗ ಆ ಮಗುವಿನ ಕತ್ತು ಅರ್ಧ ಸರಿಯಾಗಿತ್ತು. ಆವತ್ತು ಕ್ರಿಯಾಸಿದ್ಡಿಃ ಸತ್ವೇ ವಸತಿ ಮಹತಾಂ ನೋಪಕರಣೇ ಎಂಬುದು ಅರ್ಥವಾಗಿತ್ತು.
ಮೇಲಿನ ಶ್ಲೋಕದ ಅರ್ಥವೇನೆಂದರೆ,
“ರಾಮನು ಸಮುದ್ರವನ್ನು ಕಾಲುನಡಿಗೆಯಲ್ಲಿ ದಾಟಿ ಲಂಕೆಯನ್ನು ಗೆದ್ದನು. ರಣಭೂಮಿಯಲ್ಲಿ ರಾಮನ ಸಹಾಯಕ್ಕೆ ಇದ್ದವರು ಕಪಿಗಳು; ವಿಪಕ್ಷದಲ್ಲಿ ಇದ್ದವರು ರಾಕ್ಷಸರು. ಆದರೆ ಒಬ್ಬ ರಾಮ ಇಡೀ ರಾಕ್ಷಸ ಕುಲವನ್ನು ಸೋಲಿಸಿದನು. ಕಾರ್ಯಸಿದ್ಧಿಯು ನಮ್ಮ ಹತ್ತಿರ ಏನಿದೆ ಎನ್ನುವುದರ ಮೇಲಲ್ಲ; ನಮ್ಮ ಸತ್ವದ (ಮನಸ್ಸಿನ ಶಕ್ತಿಯ) ಮೇಲೆ ಅವಲಂಬಿತವಾಗಿರುತ್ತದೆ.”
ಹಾಗೆಯೇ ನಾವು ಕೂಡಾ (ವೈದ್ಯರು & ರೋಗಿಗಳು) ಎಷ್ಟೋ ಬಾರಿ ರೋಗದ ಶಕ್ತಿಯನ್ನು ನೋಡಿ ಹತಾಶರಾಗುತ್ತೇವೆ. ಆದರೆ ನಮ್ಮೊಳಗಿರುವ ರಾವಣನನ್ನು ಸೋಲಿಸುವ ಶಕ್ತಿಯನ್ನು ರಾಮನು ನಮಗೆ ನೀಡಿದ್ದಾನೆ ಎಂಬುದನ್ನು ಮರೆಯುತ್ತೇವೆ.
ಶ್ರೀರಾಮಚಂದ್ರ ನಮಗೆಲ್ಲರಿಗೂ ಆರೋಗ್ಯ ಮತ್ತು ಸುಖವನ್ನು ನೀಡಲಿ.
ಶ್ರೀರಾಮ ಜಯ ರಾಮ ಜಯ ಜಯ ರಾಮ
121 - 17
ನೀವು ಊಟ ಬಲ್ಲವರಾ? ಇಂದು ಉಣ್ಣಲು ಕಲಿಯಿರಿ
ಇಂದು ಸಂಜೆ 5 ಘಂಟೆಗೆ...
Google Meet ನಲ್ಲಿ ಮೀಟಿಂಗ್ ಅನ್ನು ಸೇರಿಕೊಳ್ಳಲು, ಈ ಲಿಂಕ್ ಕ್ಲಿಕ್ ಮಾಡಿ:
meet.google.com/fyq-wgcn-jkv
ಅಥವಾ Meet ತೆರೆಯಿರಿ ಮತ್ತು ಈ ಕೋಡ್ ಅನ್ನು ನಮೂದಿಸಿ: fyq-wgcn-jkv
228 - 9
ನೀವು ಕಳೆದ ವಾರ ಕೇಳಿದ ಪ್ರಶ್ನೆಗಳಿಗೆ ಇಂದು ಉತ್ತರ ಕೊಡಬೇಕಿತ್ತು. ಅನಿವಾರ್ಯ ಕಾರಣಗಳಿಂದ ಸಾಧ್ಯವಾಗುತ್ತಿಲ್ಲ. ದಯವಿಟ್ಟು ಕ್ಷಮಿಸಿ. ಮುಂದಿನ ರವಿವಾರ ಉತ್ತರಿಸುತ್ತೇನೆ. ಇಂದು ಮಧ್ಯಾಹ್ನ 12 ಘಂಟೆಗೆ ಈ ವೀಡಿಯೋ ನೋಡಿ. ನಿಮ್ಮ ಮುಗ್ಧತೆ ಜೀವ ತೆಗೆಯದಿರಲಿ.
153 - 3
ಗಣೇಶನಿಗೆ ಡಯಾಬಿಟೀಸ್ ಇತ್ತೇ? ಅವನಿಗೆ ಗರಿಕೆ ಹುಲ್ಲು ಏಕೆ ಅಷ್ಟು ಇಷ್ಟ?
ಹಬ್ಬದ ಹಿಂದಿರುವ ವಿಜ್ಞಾನವನ್ನು ತಿಳಿದುಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ.
https://youtu.be/aVo87zD1VOo
28 - 0
ಕೆಲಸದ ಒತ್ತಡ ಮಧ್ಯದಲ್ಲಿ ಸುಲಭವಾಗಿ ಬಿಟ್ಟುಬಿಡಲು ಆಗುವುದು ಎಂದರೆ YouTube Channel. ಹಾಗಾಗಿ ನಾನು regularly irregular ಆಗಿಬಿಡುತ್ತೇನೆ. ಹಲವು ದಿನಗಳ ನಂತರ ಇಂದು ಈ ವೀಡಿಯೋ ಕೊಡುತ್ತಿದ್ದೇನೆ.
ಚ್ಯವನಪ್ರಾಶದ ಹೆಸರಿನಲ್ಲಿ ಆಗುವ ಮೋಸ, ಚ್ಯವನಪ್ರಾಶದಿಂದ ಆಗುವ ಲಾಭಗಳು, ಅದನ್ನು ಮನೆಯಲ್ಲೇ ಮಾಡಿಕೊಳ್ಳುವುದು ಹೇಗೆ, ಆಗದಿದ್ದರೆ ಯಾವ ಕಂಪನಿಯದ್ದನ್ನು ಸೇವಿಸಬಹುದು? ಎಲ್ಲವನ್ನೂ ವಿವರಿಸಿದ್ದೇನೆ. ಇಂದು ಸಂಜೆ 5 ಘಂಟೆಗೆ ನಿಮಗೆ ಸಿಗುತ್ತದೆ. ಮ್ಮವರೊಂದಿಗೆ ಹಂಚಿಕೊಳ್ಳಿ. ಧನ್ಯವಾದ.
29 - 1
ನಾನೊಬ್ಬ ಆಯುರ್ವೇದ ವೈದ್ಯನಾಗಿ, ಆಯುರ್ವೇದದಲ್ಲಿರುವ ಅನಂತ ಜ್ಞಾನವನ್ನು ಈ ಚಾನೆಲ್ ಮೂಲಕ ಕನ್ನಡದಲ್ಲಿ ತಮಗೆಲ್ಲಾ ತಲುಪಿಸಲು ಇಚ್ಛಿಸುತ್ತಿದ್ದೇನೆ. ಇದು ನಿಮಗೆಲ್ಲಾ ಸಹಾಯಕವಾಗಿರುತ್ತದೆ ಎಂದು ನಂಬಿದ್ದೇನೆ.