ತುಳಸಿವನ - ಇಲ್ಲಿ ಪ್ರಕಟವಾಗುವ ವಿಷಯಗಳೆಲ್ಲವೂ ನಮ್ಮ ಪರಂಪರೆಯ ಅಪೂರ್ವ ಜ್ಞಾನದ ಭಂಡಾರದಿಂದ ಆಯ್ದಂಥವೇ ಆಗಿವೆ.
ಬದುಕಲು ಬೇಕಾದ ಅಗತ್ಯಗಳು, ಬದುಕಿರಲು ಬೇಕಾದ ಅನಿವಾರ್ಯತೆಗಳ ನಡುವೆ ಕಲೆ, ಸಾಹಿತ್ಯ, ಸಂಗೀತ, ಸೌಂದರ್ಯ, ಕಾವ್ಯವೇ ಮೊದಲಾದ ಸುಂದರ ಚಿತ್ತಾರಗಳು ನಮ್ಮ ಸಂಸ್ಕೃತಿಯಲ್ಲಿ ದಾಖಲಾಗುತ್ತಾ ಹೋದವು. ಇವೆಲ್ಲವೂ ನಮ್ಮ ಹಿಂದಿನ ಪೀಳಿಗೆಯವರಿಂದ, ನಮ್ಮದೇ ಹಿರಿಯರ ಮುಖಾಂತರ ನಮಗೆ ಬಳುವಳಿಯಾಗಿ ಬಂದ ಜ್ಞಾನವೆಂಬ ಸಾಗರ! ಮೊಗೆದಷ್ಟೂ ಬಡವಾಗದ ಬತ್ತದ ಸಿರಿ ಇದು! ಭಾರತೀಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಶ್ರದ್ಧೆಯಿಂದ ದಾಟಿಸುವ ಅಪರೂಪದ ಹವ್ಯಾಸದಿಂದ ಒಂದಷ್ಟು ಸ್ನೇಹಿತರು ಒಟ್ಟಾಗಿ ಸೇರಿ, ತುಳಸಿವನವನ್ನು ಆರಂಭಿಸಿದ್ದೇವೆ.
ಇದು ಮಾತೃಭೂಮಿಗೆ ನಮ್ಮ ಅತ್ಯಲ್ಪ ಕೊಡುಗೆಯಾಗಿದೆ.
ತುಳಸಿವನದ ವೀಡಿಯೋಗಳಲ್ಲಿನ ಬರಹಕ್ಕೆ ಸೂಕ್ತ ಎನಿಸಿದ ಚಿತ್ರಗಳು ಹಾಗೂ ಹಿನ್ನೆಲೆ ಸಂಗೀತವನ್ನು ಸಾಮಾಜಿಕ ಜಾಲತಾಣಗಳಿಂದಲೇ ಪಡೆದಿದ್ದೇವೆ. ಅವರೆಲ್ಲರ ಋಣ ನಮ್ಮ ಮೇಲಿದೆ.
ನಮ್ಮ ವೀಡಿಯೋ ಕಂಟೆಂಟ್ ಗಳನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದು. ನಮ್ಮ ಅಭ್ಯಂತರವಿಲ್ಲ 🙏.
ತುಳಸಿವನದ community ಯಲ್ಲಿ ಹೊಸ ಹೊಳಹಿನ ಅನಾವರಣವಿದೆ. ಒಮ್ಮೆ ನೋಡಿ.
=================
ತುಳಸಿವನ ತಂಡ
ಅಂಬಿಕಾ ಸುಬ್ರಹ್ಮಣ್ಯ
ಸಂಜೀವ ಒಡೆಯರ್
=================