Channel Avatar

Atharva Global Academy @UCNSY89QDIuceruYWRTA43Dg@youtube.com

9.6K subscribers - no pronouns :c

ನಮಸ್ಕಾರ ಗೆಳೆಯರೇ, This is Educational channel. ಕರ್ನಾಟಕ ರಾಜ್ಯ


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Atharva Global Academy
Posted 1 day ago

ಮಕರ ಸಂಕ್ರಾಂತಿಯು ಸುಗ್ಗಿಯ ಹಬ್ಬವಾಗಿದ್ದು, ಇದನ್ನು ದೇಶಾದ್ಯಂತ ವಿವಿಧ ಹೆಸರುಗಳೊಂದಿಗೆ ಆಚರಿಸಲಾಗುತ್ತದೆ. ಪ್ರತಿಯೊಂದು ರಾಜ್ಯವು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಂತೆ ಹಬ್ಬವನ್ನು ಆಚರಿಸುತ್ತಾರೆ. ಸುಗ್ಗಿಯ ಕಾಲವನ್ನು ಭಾರತದಲ್ಲಿ ಸಂಕ್ರಾಂತಿ, ಲೋಹ್ರಿ, ಪೊಂಗಲ್ ಮತ್ತು ಬಿಹು ಮುಂತಾದ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಕರ್ನಾಟಕದಲ್ಲಿಯೂ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಭಾರತದ ಬಹುಪಾಲು ರಾಜ್ಯಗಳು ಸಂಕ್ರಾಂತಿಯನ್ನು ಆಚರಿಸುತ್ತವೆ. ಈ ವರ್ಷ ಜನವರಿ 14 ರಂದು ಬುಧವಾರ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುವುದು.

ಮಕರ ಸಂಕ್ರಾಂತಿಯು ಸೂರ್ಯನೊಂದಿಗೆ ಸಂಬಂಧವನ್ನು ಹೊಂದಿದ ಹಬ್ಬವಾಗಿದೆ. ಈ ಹಬ್ಬವನ್ನು ಸೌರ ಚಕ್ರಗಳ ಆಧಾರದ ಮೇಲೆ ಆಚರಿಸಲಾಗುತ್ತದೆ. ಸೂರ್ಯನು 6 ತಿಂಗಳ ಕಾಲ ಉತ್ತರದ ಕಡೆಗೆ ಚಲಿಸುವ ಸಮಯ ಇದು. ಇದನ್ನೇ ಸೂರ್ಯನ ಉತ್ತರಾಯಣ ಸಂಚಾರ ಎಂದು ಕರೆಯಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಕುರಿತು ಒಂದಿಷ್ಟು ಮಾಹಿತಿ ಹೀಗಿದೆ ನೋಡಿ..

1. ಮಕರ ಸಂಕ್ರಾಂತಿ ಇತಿಹಾಸ:
ಸಂಕ್ರಾಂತಿಯನ್ನು ದೇವತೆ ಎಂದು ಪರಿಗಣಿಸಲಾಗುತ್ತದೆ. ದಂತಕಥೆಯ ಪ್ರಕಾರ, ಸಂಕ್ರಾಂತಿಯು ಶಂಕರಾಸುರ ಎಂಬ ರಾಕ್ಷಸನನ್ನು ಕೊಂದಿತು. ಮಕರ ಸಂಕ್ರಾಂತಿಯ ಮುಂದಿನ ದಿನವನ್ನು ಕರಿದಿನ ಅಥವಾ ಕಿಂಕ್ರಾಂತ ಎಂದು ಕರೆಯಲಾಗುತ್ತದೆ. ಸಂಕ್ರಾಂತಿ ದೇವತೆಯನ್ನು ಹೊರತುಪಡಿಸಿ, ಮಕರ ಸಂಕ್ರಾಂತಿಯನ್ನು ಭಾರತದ ಎರಡು ಮಹಾಕಾವ್ಯ ಗ್ರಂಥಗಳಾದ ಪುರಾಣಗಳು ಮತ್ತು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಕೆಲವು ನಂಬಿಕೆಗಳ ಪ್ರಕಾರ, ವೈದಿಕ ಋಷಿ ವಿಶ್ವಾಮಿತ್ರನು ಈ ಹಬ್ಬವನ್ನು ಆಚರಿಸಲು ಪ್ರಾರಂಭಿಸಿದನು ಮತ್ತು ಮಹಾಭಾರತದಲ್ಲಿ ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಈ ಹಬ್ಬವನ್ನು ಆಚರಿಸಿದರು ಎನ್ನುವ ನಂಬಿಕೆಯಿದೆ.

2. ಮಕರ ಸಂಕ್ರಾಂತಿ ಮಹತ್ವ:
ಮಕರ ಸಂಕ್ರಾಂತಿಯು ಸೂರ್ಯ ದೇವನಿಗೆ ಮೀಸಲಾಗಿದೆ. ಈ ಹಬ್ಬವು ಹಿಂದೂಗಳಿಗೆ ಉತ್ತರಾಯಣ ಕಾಲ ಎಂದು ಕರೆಯಲ್ಪಡುವ ಆರು ತಿಂಗಳ ಮಂಗಳಕರ ಅವಧಿಯ ಆರಂಭವನ್ನು ಸಂಕೇತಿಸುತ್ತದೆ. ಇದು ಆಧ್ಯಾತ್ಮಿಕ ಆಚರಣೆಗಳಿಗೆ ಮಹತ್ವದ ಅವಧಿ ಎಂದು ಪರಿಗಣಿಸಲಾಗಿದೆ. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ, ಗಂಗಾ ಮತ್ತು ಜಮುನಾ ಸಂಗಮದಲ್ಲಿ ಲಕ್ಷಾಂತರ ಜನರು ಪವಿತ್ರ ಸ್ನಾನ ಮಾಡುತ್ತಾರೆ. ಈ ಪವಿತ್ರ ಸ್ನಾನವು ಜನ್ಮ ಜನ್ಮಗಳ ಪಾಪಗಳನ್ನು ಕಳೆಯುತ್ತದೆ ಎನ್ನುವ ನಂಬಿಕೆಯಿದೆ. ಜನರು ತಮ್ಮ ಪ್ರಾರ್ಥನೆಗಳನ್ನು ಸೂರ್ಯ ದೇವರಿಗೆ ಸಲ್ಲಿಸುತ್ತಾರೆ.

3. ಮಕರ ಸಂಕ್ರಾಂತಿ ಆಚರಿಸುವ ವಿಧಾನ:
ಮಕರ ಸಂಕ್ರಾಂತಿ ದಿನದಂದು ಮುಂಜಾನೆ ಬೇಗ ಎದ್ದು ಪವಿತ್ರ ನದಿಗಳಲ್ಲಿ ಸ್ನಾನ ಮಾಡಬೇಕು. ಒಂದು ವೇಳೆ ಪವಿತ್ರ ನದಿ ಸ್ನಾನ ಮಾಡಲು ಸಾಧ್ಯವಾಗದೇ ಇದ್ದರೆ ಮನೆಯಲ್ಲೇ ಸ್ನಾನ ಮಾಡುವ ನೀರಿಗೆ ಗೋಮೂತ್ರ ಅಥವಾ ಗಂಗಾಜಲ ಬೆರೆಸಿ ಸ್ನಾನ ಮಾಡಬಹುದು. ಮನೆಯ ಮಹಿಳೆಯರು ಶುದ್ಧರಾದ ಬಳಿಕ ಮನೆಯ ಅಂಗಳದಲ್ಲಿ ರಂಗೋಲಿಯಲ್ಲಿ ಹಾಕಬೇಕು. ನಂತರ ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸಿ ಪೂಜೆಯನ್ನು ಮಾಡಬೇಕು. ಈ ದಿನ ಶನಿ ದೇವನನ್ನು ಪೂಜಿಸುವುದು ಕೂಡ ಮಂಗಳಕರವಾಗಿರುತ್ತದೆ. ಈ ದಿನ ಪೂಜೆಯ ನಂತರ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನವನ್ನು ಮಾಡಬೇಕು.

4. ಮಕರ ಸಂಕ್ರಾಂತಿ ದಿನ ಎಳ್ಳು - ಬೆಲ್ಲ:
ಮಕರ ಸಂಕ್ರಾಂತಿಯ ದಿನದಂದು ಎಳ್ಳು ಮತ್ತು ಬೆಲ್ಲಕ್ಕೆ ಹೆಚ್ಚಿನ ಮಹತ್ವವಿದೆ. ಆದುದರಿಂದ ಇದನ್ನು ತಿಲ ಸಂಕ್ರಾಂತಿ ಎಂದೂ ಕರೆಯುತ್ತಾರೆ. ಮಕರ ಸಂಕ್ರಾಂತಿಯ ದಿನ ಬೆಲ್ಲ, ಎಳ್ಳು ತಿನ್ನುವುದಲ್ಲದೇ, ನೀರಿನಲ್ಲಿ ಎಳ್ಳು ಸೇರಿಸಿ ಸ್ನಾನ ಮಾಡುತ್ತಾರೆ. ಈ ದಿನ ಎಳ್ಳು - ಬೆಲ್ಲವನ್ನು ಪರಸ್ಪರ ಹಂಚುವ ಮೂಲಕ ಹಬ್ಬದ ಖುಷಿಯನ್ನು ಸಂಭ್ರಮಿಸಲಾಗುತ್ತದೆ.
5. ಮಕರ ಸಂಕ್ರಾಂತಿಯ ಸಮಯದಲ್ಲಿ ಗಾಳಿಪಟದ ಮಹತ್ವ:
ಮಕರ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಕಂಡುಬರುವ ಅತ್ಯಂತ ರೋಮಾಂಚಕ ದೃಶ್ಯಗಳಲ್ಲಿ ಒಂದು ಚಳಿಗಾಲದ ಬೆಳಗಿನ ಆಕಾಶದಲ್ಲಿ ಮೇಲೇರುತ್ತಿರುವ ವರ್ಣರಂಜಿತ ಗಾಳಿಪಟಗಳ ದೃಶ್ಯವಾಗಿದೆ. ಗಾಳಿಪಟ ಹಾರಿಸುವ ಸ್ಪರ್ಧೆಗಳನ್ನೂ ವಿವಿಧೆಡೆ ಆಯೋಜಿಸಲಾಗುತ್ತದೆ. ಅನೇಕರು ಈ ಆನಂದದಾಯಕ ಚಟುವಟಿಕೆಯನ್ನು ದೇವರುಗಳಿಗೆ ಕೃತಜ್ಞತೆ ಸಲ್ಲಿಸುವ ಒಂದು ರೂಪವೆಂದು ಪರಿಗಣಿಸುತ್ತಾರೆ.

ವಿವಿಧ ಪ್ರದೇಶಗಳಿಗೆ ತಕ್ಕಂತೆ ಮಕರ ಸಂಕ್ರಾಂತಿ ಆಚರಣೆಯ ವಿಧಾನವು ಭಿನ್ನ ಭಿನ್ನವಾಗಿರುತ್ತದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋದಂತೆ ಮಕರ ಸಂಕ್ರಾಂತಿ ಆಚರಣೆಯ ವಿಧಾನ, ಅದನ್ನು ಕರೆಯುವ ಹೆಸರು ಕೂಡ ಬದಲಾಗುವುದು. ಮಕರ ಸಂಕ್ರಾಂತಿಯಂದು ಎಳ್ಳು - ಬೆಲ್ಲವನ್ನು ಹಂಚುವ ಮೂಲಕ ಸಂತೋಷವನ್ನು ಹಂಚಿಕೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸಿ.

ಕೃಪೆ : ವಿಜಯ ಕರ್ನಾಟಕ

2 - 0

Atharva Global Academy
Posted 1 day ago

ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು......

2 - 0

Atharva Global Academy
Posted 1 week ago

ಇಸ್ರೋದ ನೂತನ ಅಧ್ಯಕ್ಷರಾಗಿ ಡಾ.ವಿ.ನಾರಾಯಣನ್ ಅವರನ್ನು ನೇಮಕ ಮಾಡಲಾಗಿದೆ. ಅವರು ನೂತನ ಬಾಹ್ಯಾಕಾಶ ಕಾರ್ಯದರ್ಶಿಯೂ ಕಾರ್ಯನಿರ್ವಹಿಸಲಿದ್ದಾರೆ. ಪ್ರಸ್ತುತ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (ಎಲ್‌ಪಿಎಸ್‌ಸಿ) ನಿರ್ದೇಶಕರಾಗಿರುವ ಡಾ. ನಾರಾಯಣನ್ ಅವರು ಇಸ್ರೋ ಹೊಸ ಅಧ್ಯಕ್ಷರಾಗಿ ಜನವರಿ 14 ರಿಂದ ಹಾಲಿ ಅಧ್ಯಕ್ಷ ಎಸ್. ಸೋಮನಾಥ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

6 - 0

Atharva Global Academy
Posted 1 week ago

What is “INS Surat” that was recently seen in news?

3 - 0

Atharva Global Academy
Posted 1 week ago

Which state is the host of National SARAS mela 2025?

1 - 0

Atharva Global Academy
Posted 1 week ago

Shendurney Wildlife Sanctuary is located in which state?

1 - 0

Atharva Global Academy
Posted 1 week ago

ಇವರು ದೇಶದ ಮೊದಲ ಮಹಿಳಾ ಶಿಕ್ಷಕಿ. ಅಕ್ಷರದ ಅವ್ವ ಎಂದು ಕರೆಯುತ್ತಾರೆ.

6 - 0

Atharva Global Academy
Posted 1 week ago

ನಿಮ್ಮೇಲ್ಲರ ಸಹಕಾರ, ಪ್ರೋತ್ಸಾಹದಿಂದ ನಿಮ್ಮ ಚಾನೆಲ್ ಉತ್ತಮ ಬೆಳವಣಿಗೆ ಕಾಣುತ್ತಿದೆ.

3 - 0

Atharva Global Academy
Posted 2 weeks ago

ವಿಕ್ರಮಾಂಕದೇವ ಚರಿತ ಕೃತಿ ಬರೆದವರು?

22 - 1

Atharva Global Academy
Posted 2 weeks ago

ಮೊಗಲ್ ಸಾಮ್ರಾಜ್ಯದ ಸ್ಥಾಪಕ ಯಾರು?

23 - 1