ಬದುಕನ್ನು ಬದುಕುವುದು ಪ್ರತಿಯೊಬ್ಬರಿಗೂ ಒಂದು ಅಗಾಧತೆಯೇ. ವಿಜೃಂಭಣೆಯಿಂದ ಬದುಕುವುದು, ಸರಳವಾಗಿ ಬದುಕುವುದು ಹೀಗೆ ಇನ್ನೂ ಅನೇಕಾನೇಕ ರೀತಿಯಲ್ಲಿ ಬದುಕನ್ನ ಬದುಕುವವರಿದ್ದಾರೆ. ಆದರೆ ಬದುಕುತ್ತಿರುವ ಯಾವುದೇ ಒಂದು ಘಳಿಗೆಯಲ್ಲಿ ಬದುಕು ದಾರಿ ತಪ್ಪಿದರೆ? ಆಗ ನಿರಾಶರಾಗದಿರುವುದಕ್ಕೆ, ಹತಾಶರಾಗದಿರುವುದಕ್ಕೆ, ಬದುಕು ಸರಿಯಾದ ದಾರಿಗೆ ಬರುವವರೆಗೆ ಇರಬೇಕಾದ ತಾಳ್ಮೆಯನ್ನ, ಆಶಾವಾದವನ್ನ,ನಮ್ಮದೇ ನಾಡಿನ ದಾಸರ, ಶರಣರ, ತತ್ವಪದಕಾರರ, ಚಿಂತಕರ, ಸಂತರ ವಚನಗಳ, ತತ್ವಪದಗಳ,ವಿಶ್ಲೇಷಣೆ ಮತ್ತು motivational ವಿಡಿಯೋಗಳೊಂದಿಗೆ ಈ ನನ್ನ "ಬದುಕಿನ ಭರವಸೆಗಳು" ಚಾನೆಲ್ ನಿರಂತರ ನಿಮ್ಮೊಂದಿಗಿರುತ್ತದೆ. ಚಾನೆಲ್ ಗೆ visit ಮಾಡಿ subscribe ಮಾಡಿ.ಧನ್ಯವಾದಗಳು 🙏🙏