Kadrolli jatre
7 videos • 97 views • by you tube ಪಯಣ. you tube payana ಸುರಿಯುವ ಮಳೆಯಲ್ಲೂ ಅದ್ಧೂರಿಯಾಗಿ ಜರುಗಿದ ಶ್ರೀ ವೀರಬದ್ದೇವರ ಮಹಾ ರಥೋತ್ಸವ. ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರು ತಾಲೂಕಿನ ಸುಕ್ಷೇತ್ರವಾದ ಕಾದರವಳ್ಳಿಯ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ವೀರಭದ್ರೇಶ್ವರ ಮಹಾರುಥೋತ್ಸವ ಅದ್ದೂರಿಯಾಗಿ ಜರುಗಿತು. ರಥೋತ್ಸವದ ವೇಳೆ ಬಾರಿ ಮಳೆ ಬಂದರೂ ಸಹ ಭಕ್ತರು ಮಳೆಯನ್ನು ಲೆಕ್ಕಿಸದೆ ಅತ್ಯಂತ ಹುರುಪಿನಿಂದ ರಥೋತ್ಸವವನ್ನು ಮುಂದೆ ಸಾಗಿಸುತ್ತಿದ್ದರು. ಅದೇ ರೀತಿ ಊರಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಮಹಿಳೆಯರು ಸಹ ಪಾಲ್ಗೊಂಡಿದ್ದರು. ಊರಿನ ಯುವಕರು ಜಾಂಜ ಹಾಗೂ ಡ್ರಮ್ ಸೆಟ್ಗಳನ್ನು ಮಳೆಯಲ್ಲೂ ಸಹ ಬಾರಿಸುತ್ತಿದ್ದರು. ಅದೇ ರೀತಿ ಯುವಕರು ನಂದಿಕೋಲನ್ನು ಕೈಯಲ್ಲಿ ಹಿಡಿಯುವುದರ ಮೂಲಕ ತಮ್ಮ ಸೇವೆಯನ್ನು ಶ್ರೀ ವೀರಭ್ರೇಶ್ವರ ದೇವರಿಗೆ ಭಕ್ತಿಯಿಂದ ಅರ್ಪಿಸಿದರು. ಒಟ್ಟಿನಲ್ಲಿ ಈ ವರ್ಷದ ಕೊನೆಯ ದಿನದ ಶ್ರೀ ವೀರಭದ್ರೇಶ್ವರ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ಸಂಪೂರ್ಣಗೊಂಡಿತು.