in the future - u will be able to do some more stuff here,,,!! like pat catgirl- i mean um yeah... for now u can only see others's posts :c
*೭೫ ರ ವಜ್ರ ಮಹೋತ್ಸವಕ್ಕೇ ಸಾಕ್ಷಿಕರಿಸಿದ ಗಣೇಶವಾಡಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ- ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ*
*ಘಟಪ್ರಭಾ-* ೧೯೪೯ ರಲ್ಲಿ ಆರಂಭಗೊಂಡ ಗಣೇಶವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಈ ಭಾಗದಲ್ಲಿ ಶಿಕ್ಷಣದ ಅರಿವು ಮೂಡಿಸಿ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ರೂಪಿಸಿದ್ದಲ್ಲದೇ ಸಮಾಜದಲ್ಲಿ ಬದಲಾವಣೆಗೆ ಸಾಕ್ಷಿಯಾಗಿದ್ದು, ಈ ಶಾಲೆಗೆ ಈಗ ೭೫ ರ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸುತ್ತಿರುವುದು ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದೆ ಎಂದು ಅರಭಾವಿ ಶಾಸಕ ಮತ್ತು ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಶಾಲೆಯ ಸಾಧನೆಗಳನ್ನು ಶ್ಲಾಘಿಸಿದರು.
ಮಂಗಳವಾರದಂದು ಇಲ್ಲಿಗೆ ಸಮೀಪದ ಗಣೇಶವಾಡಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣವಿದ್ದರೆ ಸಮಾಜದಲ್ಲಿ ಯಾವುದು ಒಳ್ಳೇಯದು? ಯಾವುದು ಕೆಟ್ಟದ್ದು? ಎಂಬ ಅರಿಯು ಮೂಡುತ್ತದೆ. ಕಾರಣ ಇಂದಿನ ತಂತ್ರಜ್ಞಾನದ ಯುಗದಲ್ಲಿ ಶಿಕ್ಷಣ ಅತ್ಯಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಕಳೆದ ೩೦- ೪೦ ವರ್ಷಗಳ ಇತಿಹಾಸವನ್ನು ಅವಲೋಕಿಸಿದಾಗ ಆಗಿನ ಕಾಲದಲ್ಲಿ ಜನರು ಶಿಕ್ಷಣಕ್ಕೆ ಒತ್ತು ಕೊಡುತ್ತಿರಲಿಲ್ಲ. ಅದರ ಅರಿವು ಅವರಿಗೆ ತಿಳಿದಿರಲಿಲ್ಲ. ಈಗ ಕಾಲ ಬದಲಾವಣೆಯತ್ತ ಸಾಗುತ್ತಿದೆ. ಪ್ರತಿಯೊಬ್ಬರೂ ಶಿಕ್ಷಣದ ಕಡೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಕಾಲವು ಬದಲಾಗುತ್ತಿದ್ದಂತೆಯೇ ಜನರು ಸಹ ಬದಲಾವಣೆಯನ್ನು ಬಯಸುತ್ತಿದ್ದಾರೆ. ಅದು ಯಾವುದೇ ಕ್ಷೇತ್ರ ಆಗಬಹುದು. ಆನರು ಈಗ ಹೆಚ್ಚೆಚ್ಚು ಪ್ರಜ್ಞಾವಂತರಾಗುತ್ತಿದ್ದಾರೆ. ಇದಕ್ಕೆ ಕಾರಣ ವಿದ್ಯೆ ಎಂಬ ಅಸ್ತç.ಈಗಿರುವ ಪಾಲಕರು ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತಿದ್ದಾರೆ. ಇದರಿಂದ ಸಮಾಜವು ಸಹ ಸುಧಾರಣೆಗೊಳ್ಳುತ್ತಿದೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಪ್ರತಿಪಾದಿಸಿದ ತತ್ವ- ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಶಿಕ್ಷಣ, ಸಂಘಟನೆ, ಹೋರಾಟದಿಂದ ಸಮಾಜವು ಬಲಿಷ್ಟವಾಗುತ್ತಿದೆ ಎಂದು ಅವರು ತಿಳಿಸಿದರು.
೭೫ರ ಸಂಭ್ರಮದಲ್ಲಿರುವ ಈ ಶಾಲೆಗೆ ಎರಡು ಕೊಠಡಿಗಳನ್ನು ನಿರ್ಮಿಸಿ ಕೊಡಲಾಗುವುದು. ಗ್ರಾಮಸ್ಥರ ಬೇಡಿಕೆಯಂತೆ ಗಣೇಶವಾಡಿ ದ್ವಾರ ಬಾಗಿಲು ನಿರ್ಮಾಣ ಕಾರ್ಯಕ್ಕೆ ಕೈಲಾದ ಸಹಾಯ ಮಾಡಲಾಗುವುದು. ಪೋಡಿ ಮುಕ್ತ ಗ್ರಾಮವನ್ನಾಗಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಸಾಧಕ- ಬಾಧಕ ವರದಿಯನ್ನು ನೀಡಬೇಕು. ಸಾಮಾನ್ಯ ರೈತರಿಗೂ ಇದರಿಂದ ಅನುಕೂಲವಾಗಬೇಕು. ಎರಡು ಗುಂಟೆ ಜಮೀನು ಹೊಂದಿದವರು ಈಗ ಎಕರೆಗಟ್ಟಲೇ ಜಮೀನು ಅನುಭವಿಸುತ್ತಿದ್ದಾರೆ. ಇದರ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಇದೇ ರೀತಿಯಾಗಿ ಖಂಡ್ರಟ್ಟಿ ಗ್ರಾಮದಲ್ಲಿಯೂ ಈ ರೀತಿಯಾಗಿ ನಡೆದಿತ್ತು. ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ಮಾಡಿ ಕೊನೆಗೂ ಮೂರು ವರ್ಷಕ್ಕೆ ಖಂಡ್ರಟ್ಟಿ ಪೋಡಿ ಮುಕ್ತ ಗ್ರಾಮವಾಯಿತು. ಗಣೇಶವಾಡಿ ಗ್ರಾಮವನ್ನು ಸಹ ಪೋಡಿ ಮುಕ್ತ ಗ್ರಾಮವನ್ನಾಗಿ ಪರಿವರ್ತಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆಯನ್ನು ನೀಡಿದರು. ಮುಂದಿನ ದಿನಗಳಲ್ಲಿ ಗ್ರಾಮಸ್ಥರ ಬೇಡಿಕೆಗಳಿಗೆ ಹಂತ- ಹಂತವಾಗಿ ಸ್ಪಂದಿಸುವ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಅರಭಾವಿ ದುರದುಂಡೀಶ್ವರ ಮಠದ ಗುರು ಬಸವಲಿಂಗ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಅಪ್ಪಯ್ಯ ಮಾಳ್ಯಾಗೋಳ ವಹಿಸಿದ್ದರು.
ವೇದಿಕೆಯಲ್ಲಿ ಗೋಕಾಕ ತಹಶೀಲ್ದಾರ ಡಾ. ಮೋಹನ ಭಸ್ಮೇ, ಮೂಡಲಗಿ ಬಿಇಓ ಅಜೀತ ಮನ್ನಿಕೇರಿ, ಪ್ರಭಾ ಶುಗರ್ಸ ನಿರ್ದೇಶಕ ಶಿವಲಿಂಗ ಪೂಜೇರಿ, ಮದನ ದೇಶಪಾಂಡೆ, ಕೆಂಚಪ್ಪ ಪಾಟೀಲ, ಹಣಮಂತರಾವ ದೇಶಪಾಂಡೆ, ಗ್ರಾ.ಪಂ. ಅಧ್ಯಕ್ಷ ನಾಗಪ್ಪ ಹೊರಟ್ಟಿ, ನ್ಯಾಯವಾದಿ ಸುರೇಶ ಜಾಧವ, ಶ್ರೀಪತಿ ಗಣೇಶವಾಡಿ, ಸಿದ್ರಾಮ ಮೂಲಿಮನಿ, ರಮೇಶ ಪೂಜೇರಿ, ಯಲಗೌಡ ಪಾಟೀಲ, ಶಾಲೆಯ ಪ್ರಧಾನ ಶಿಕ್ಷಕ ಆರ್.ಡಿ. ಪತ್ತಾರ, ಆರ್.ಕೆ.ಹಂದಿಗುಂದ, ಗ್ರಾಮ ಪಂಚಾಯತಿ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಸುತ್ತಮುತ್ತಲಿನ ಅನೇಕ ಜನ ಮುಖಂಡರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
16 - 0
ಭೀಕರ ರಸ್ತೆ ಅಪಘಾತ ಗೋಕಾಕನ 6 ಜನ ಸ್ಥಳದಲ್ಲಿಯೇ ಸಾವು.
ಮಧ್ಯಪ್ರದೇಶದ ಜಬಲ್ಪುರ ನಲ್ಲಿ ನಡೆದ ಅಪಘಾತ.
ಜಬಲ್ಪುರ ಜಿಲ್ಲೆಯ ಖಿತೌಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ಇಂದು ನಸುಕಿನ ಜಾವ 5 ಗಂಟೆಗೆ ನಡೆದ ಅಪಘಾತ.
KA49M5054 ಸಂಖ್ಯೆಯ ತೂಫಾನ್ ವಾಹನ ಅಪಘಾತ.
ಪ್ರಯಾಗರಾಜ್ ದಿಂದ ಜಬಲ್ಪುರಗೆ ತೆರಳುವಾಗ ನಡೆದ ಅಪಘಾತ.
ಚಾಲಕನ ನಿಯಂತ್ರಣ ತಪ್ಪಿ ಡಿವೈಡರಗೆ ಡಿಕ್ಕಿಯಾಗಿ ದುರ್ಘಟನೆ.
ಆರು ಜನ ಸ್ಥಳದಲ್ಲಿಯೇ ಸಾವು ಇಬ್ಬರ ಸ್ಥಿತಿ ಗಂಭೀರ.
ಗಾಯಗೊಂಡ ಇಬ್ಬರೂ ಜಬಲ್ಪುರ ಜಿಲ್ಲಾಸ್ಪತ್ರೆಗೆ ದಾಖಲು..
ಅಲ್ಲಿನ ಜಿಲ್ಲಾ ಪೊಲೀಸರೊಂದಿಗೆ ಸಂಪರ್ಕದಲ್ಲಿರುವ ಬೆಳಗಾವಿ ಜಿಲ್ಲಾ ಪೊಲೀಸರು.
ಮೃತರು
ಬಾಲಚಂದ್ರ ಗೌಡರ(50)
ಸುನೀಲ್ ಶೇಡಶ್ಯಾಳೆ(45)
ಬಸವರಾಜ್ ಕುರ್ತಿ (63)
ಬಸವರಾಜ್ ದೊಡಮಾಳ್(49)
ಈರಣ್ಣ ಶೇಬಿನಕಟ್ಟಿ(27)
ವಿರುಪಾಕ್ಷ ಗುಮತಿ (61)
ಗಾಯಗೊಂಡವರು
ಮುಸ್ತಾಕ ಶಿಂಧಿಕುರಬೇಟ
ಸದಾಶಿವ ಉಪದಲಿ..........
20 - 1
ಮೂಡಲಗಿ - ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಅನಧಿಕೃತ ವಸ್ವತ್ತುಗಳಿಗೂ ಸಹ ಇ- ಖಾತಾ ಅಭಿಯಾನವು ನಡೆಯಲಿದ್ದು,
ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು.
ಶನಿವಾರದಂದು ಪುರಸಭೆ ಆವರಣದಲ್ಲಿ ಜರುಗಿದ ಇ - ಖಾತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಅಭಿಯನದಿಂದ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಸುಮಾರು ೨೫೦೦ ಕ್ಕೂ ಹೆಚ್ಚು ಆಸ್ತಿಗಳು ಇ - ಖಾತಾಕ್ಕೆ ಒಳಪಟ್ಟರೆ ಅಂದಾಜು ೨ ರಿಂದ ೨.೫೦ ಕೋಟಿ ರೂಪಾಯಿಗಳ ಆದಾಯವು ಪುರಸಭೆಗೆ ಹರಿದು ಬರಲಿದೆ. ಫಲಾನುಭವಿಗಳು ತಕ್ಷಣವೇ ಪುರಸಭೆ ಅಧಿಕಾರಿಗಳನ್ನು ಸಂಪರ್ಕಿಸಿ ಇ ಖಾತಾ ಉತ್ತರಗಳನ್ನು ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳನ್ನು ಸಂಪರ್ಕ ಮಾಡಬೇಡಿ ಎಂದು ಸಲಹೆ ನೀಡಿದ ಅವರು, ಈ ಅಭಿಯಾನವು ಮೇ ತಿಂಗಳ ಅಂತ್ಯದವರೆಗೆ ನಡೆಯಲಿದೆ ಎಂದರು.
ಸ್ಥಳೀಯ ಎಸ್ಸಿ ಕಾಲನಿಯ ಸುಮಾರು ೩೦೦
ಕುಟುಂಬಗಳಿಗೆ ಖಾತಾ
ಉತಾರಗಳನ್ನು ಮಾಡಿಕೊಟ್ಟು ಅಂಥ ಬಡ ಕುಟುಂಬಗಳಿಗೆ ಅನುಕೂಲ
ಮಾಡಿಕೊಡುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿೃವೃದ್ಧಿ ಕಾರ್ಯಗಳು ಕುಂಠಿಗೊಂಡಿವೆ. ಇದರಿಂದ ನಮ್ಗೂ ಸಹ ಅಡಚಣೆಯಾಗಿದೆ. ಕಳೆದ ಎರಡು ವರ್ಷಗಳಿಂದ ಯಾವ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಹೊಸ ಹೊಸ ಯೋಜನೆಗಳು ಸಾಕಾರಗೊಳ್ಳುತ್ತಿಲ್ಲ. ಮುಂದಿನ ತಿಂಗಳು ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು.
ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿ ಮಾಡುವಂತೆಯೂ ಇದಕ್ಕಾಗಿ ಅನುದಾನವನ್ನು ನೀಡುವಂತೆಯೂ ಸಚಿವ ಸತೀಶ್ ಜಾರಕಿಹೊಳಿ ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಬಹು ನಿರೀಕ್ಷಿತ ಮೂಡಲಗಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ನಿವೇಶನವನ್ನು ಗುರುತಿಸಲಾಗಿದೆ. ಆದರೆ ಸರ್ಕಾರದಿಂದ ಅನುದಾನದ ಕೊರತೆಯಿಂದ ವಿಳಂಬವಾಗುತ್ತಿದೆ. ೮.೬೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಮುಂದಿನ ಏಪ್ರಿಲ್ ತಿಂಗಳಲ್ಲಿ ಈ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸುವ ಇರಾದೆ ಇದೆ. ಈ ವರ್ಷಾಂತ್ಯದಲ್ಲಿ ಹದಗೆಟ್ಟಿರುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದೆಂದು ಎಂದು ತಿಳಿಸಿದರು.
ಮೂಡಲಗಿ ಪಟ್ಟಣದ ವ್ಯಾಪ್ತಿಯ ಸಾರ್ವಜನಿಕರಿಗೆ ಇನ್ನು ಮುಂದೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಇದಕ್ಕಾಗಿ ಅರಭಾವಿ, ಕಲ್ಲೋಳಿ, ನಾಗನೂರು ಮತ್ತು ಮೂಡಲಗಿ ಸೇರಿ ಒಟ್ಟು ೧೪೦.೬೯ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಕ್ಷೇತ್ರದ ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ಶುದ್ಧವಾದ ಕುಡಿಯುವ ನೀರು ದೊರೆಯಲಿದೆ. ಪ್ರತಿ ಮನೆ - ಮನೆಗೆ ನೀರು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ವಿದ್ಯುಕ್ತವಾಗಿ ಎರಡು ಕುಟುಂಬದವರಿಗೆ ಇ - ಖಾತಾ ಉತಾರಗಳನ್ನು
ನೀಡುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಪುರಸಭೆ ಅಧ್ಯ
51 - 0
ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶ್ರೀಮತಿ ರೇಖಾ ಗುಪ್ತ ಅವರಿಗೆ ಹಾರ್ದಿಕ ಅಭಿನಂದನೆಗಳು.
#DelhiCM #RekhaGupta #kannada9news
19 - 0
ನಾಡಿನ ಸಮಸ್ತ ಜನತೆಗೆ ರಥಸಪ್ತಮಿಯ ಶುಭಾಶಯಗಳು.
ಎಲ್ಲ ಗ್ರಹಗಳ ಅಧಿಪತಿಯಾಗಿರುವ ನಿರಾಕಾರವಾದ ಭಗವಂತನ ಸಗುಣರೂಪವಾಗಿರುವ ಭಗವಾನ್ ಸೂರ್ಯನಾರಾಯಣ ಜಗತ್ತಿಗೆ ಚೈತನ್ಯವನ್ನು ನೀಡಲಿ.
#ರಥಸಪ್ತಮಿ #Rathasaptami #kannada9news
39 - 1
9 ವರ್ಷಗಳವರಿಗೂ ಜಾಲಿ ಜಾಲಿ....
9 ವರ್ಷಗಳ ನಂತರ ಎಲ್ಲಾ ಖಾಲಿ ಖಾಲಿ..?
https://youtu.be/5k2Vt8zq0g0?si=7WxCe...
1 - 0
ವಿಜಯ ಸಾಧಿಸಿದ ಭಾರತೀಯ ನಾರಿಶಕ್ತಿ!
ಅಂಡರ್ -19 ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತೀಯ ಮಹಿಳಾ ತಂಡಕ್ಕೆ ಅಭಿನಂದನೆಗಳು!
#kannada9news
#U19WorldCup #U19Worldcup2025
14 - 0
ಅಪ್ರತಿಮ ದೇಶಭಕ್ತೆ, ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ್ತಿ, ಕನ್ನಡ ನಾಡಿನ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.
#KitturChennamma #kannada9news #Lakhanjarkiholi #MLC #Belagavi
72 - 0
ಮತದಾನದ ಪ್ರಾಮುಖ್ಯತೆ ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷದ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವಾಗಿ ಆಚರಿಸಲಾಗುತ್ತದೆ.
ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸೋಣ, ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸೋಣ.
#NationalVotersDay #kannada9news #Lakhanjarkiholi #MLC #Belagavi
88 - 0
Kannada9news instagram www.instagram.com/reel/C40FhhZPSjc/?igsh=YzY3bHM4b…
facebook
www.facebook.com/kannada9news?mibextid=ZbWKwL