ವಿಸ್ತಾರ ಓಂಕಾರ.. ಇದು ವೈಜ್ಞಾನಿಕ ಆಧಾರದಲ್ಲಿ ಆಧ್ಯಾತ್ಮಿಕತೆಯನ್ನು, ಧಾರ್ಮಿಕತೆಯನ್ನು ಸರ್ವರಿಗೂ ಸರಳವಾಗಿ ತಿಳಿಸಿಕೊಡುವ ಯುಟ್ಯೂಬ್ ಚಾನೆಲ್. ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಮತ್ತೊಂದು ಕೊಡುಗೆಯಾಗಿರುವ ‘ವಿಸ್ತಾರ ಓಂಕಾರ’ದ ಮೂಲಕ ಜನರಲ್ಲಿ ಬದುಕಿನ ಭರವಸೆಯನ್ನು ಹೆಚ್ಚಿಸುವುದು, ಅಂತರಂಗದ ಶುದ್ಧಿಯ ಮೂಲಕ ನೆಮ್ಮದಿಯುತ ಜೀವನ ನಡೆಸಲು ಸಾಧನವಾಗಬೇಕೆಂಬುವುದು ನಮ್ಮ ಧ್ಯೇಯ.
ದೇವರು, ಅಧ್ಯಾತ್ಮದ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ನಂಬಿಕೆಯಿರುತ್ತದೆ, ಅಭಿಪ್ರಾಯವಿರುತ್ತದೆ. ಜೀವನದಲ್ಲಿ ಗುರಿ, ಯಶಸ್ಸಿನೆಡೆಗೆ ಹೆಜ್ಜೆ ಇಡುವುದರಿಂದ ಹಿಡಿದು, ಸಂಕಷ್ಟಗಳು, ಅಡೆತಡೆಗಳು ಎದುರಾದಾಗ ಸರಿಯಾದ ರೀತಿಯಲ್ಲಿ ಅವುಗಳನ್ನು ಎದುರಿಸಿ ಮುನ್ನಡೆಯಲು ಮಾರ್ಗದರ್ಶನದ, ಪ್ರೇರಣೆಯ ಅವಶ್ಯಕತೆ ಇರುತ್ತದೆ. ಸರ್ವಜನರಿಗೂ ಸಂಸ್ಕಾರವನ್ನು ತಿಳಿಸಿಕೊಡುವ, ಸನ್ಮಾರ್ಗವನ್ನು ತೋರುವ ವಿಚಾರಗಳನ್ನುಈ ಚಾನೆಲ್ನಲ್ಲಿ ನೀಡಲಾಗುವುದು. ಧಾರ್ಮಿಕ, ಅಧ್ಯಾತ್ಮಿಕ, ಜ್ಯೋತಿಷ ವಿಚಾರಗಳಾದ ಧ್ಯಾನ, ಭಕ್ತಿ, ಆರಾಧನೆ, ಜ್ಯೋತಿಷ ಫಲಾಫಲ, ಸಂಖ್ಯಾಶಾಸ್ತ್ರ, ಸಂಸ್ಕೃತಿ, ಪ್ರವಚನ ಹೀಗೆ ಹತ್ತಾರು ವಿಚಾರಗಳನ್ನು ವೈಜ್ಞಾನಿಕ ತಳಹದಿಯಲ್ಲಿ ನೀಡುವ ಮೂಲಕ ನೋಡುಗರಲ್ಲಿ ಸಕಾರಾತ್ಮಕ ಚಿಂತನೆಯನ್ನು ಬೆಳೆಸುವುದು ನಮ್ಮ ಆಶಯ.