ಭಾರತದ ಆರ್ಥಿಕತೆಯ ವೇಗ ಹೆಚ್ಚಿಸುವಲ್ಲಿ ನವೋದ್ಯಮಗಳ ಪಾತ್ರ ಮಹತ್ತರವಾಗಿದೆ. ಉದ್ಯಮಗಳನ್ನು ಆರಂಭಿಸಿ, ಉದ್ಯಮಿಗಳಾಗಿ, ಒಂದಷ್ಟು ಜನರಿಗೆ ಉದ್ಯೋಗವನ್ನೂ ನೀಡಬಯಸುವವರಿಗೆ ಬಿಸಿನೆಸ್ ಐಡಿಯಾಗಳನ್ನು ನೀಡುವ ಉದ್ದೇಶದಿಂದ ರೂಪುಗೊಂಡ ಚಾನೆಲ್ ವಿಸ್ತಾರ ಬಿಸಿನೆಸ್!
ಅಲ್ಪ ಹಾಗೂ ಮಧ್ಯಮ ಪ್ರಮಾಣದ ಬಂಡವಾಳವನ್ನ ಹೂಡಿ ಕೈ ತುಂಬಾ ಲಾಭ ಪಡೆಯಬಹುದಾದ ಉದ್ಯಮಗಳು ಯಾವುವು? ಅವುಗಳನ್ನ ಆರಂಭಿಸೋದು ಹೇಗೆ? ಅಂಥ ಉದ್ಯಮಗಳ ಆರಂಭಕ್ಕೆ ಏನೆಲ್ಲ ಸಿದ್ಧತೆಯಾಗಬೇಕು ಅನ್ನೋದನ್ನು ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಮತ್ತೊಂದು ಕೊಡುಗೆಯಾಗಿರುವ ಈ ಚಾನೆಲ್ ತಿಳಿಸುತ್ತಿದೆ.
ಮನೆಯಿಂದಲೇ ಉದ್ಯಮ ಆರಂಭಿಸಿ ಹಣ ಗಳಿಸಬಯಸುವವರು, ಕೃಷಿ ಮಾಡುತ್ತಲೇ ಆ ಉತ್ಪನ್ನಗಳಿಂದ ಬಿಸಿನೆಸ್ ಮಾಡಬಯಸುವವರು, ಟ್ರೆಂಡ್ಗೆ ತಕ್ಕಂತ ಬಿಸಿನೆಸ್ ಶುರು ಮಾಡಬೇಕು ಎಂದುಕೊಂಡವರು.. ಅರರೆ, ಇಂಥದ್ದೊಂದು ಬಿಸಿನೆಸ್ ಇದ್ಯಾ ಅಂತ ನಿಮಗೆ ಅಚ್ಚರಿ ಹುಟ್ಟಿಸಿ, ನಾವು ಈ ಬಿಸಿನೆಸ್ ಮಾಡಬಹುದಲ್ಲ ಎನಿಸುವಂಥ ಉದ್ಯಮಗಳು, ಹೀಗೆ ಬಿಸಿನೆಸ್ ಮಾಡಲೇಬೇಕು ಎಂದುಕೊಂಡ ಎಲ್ಲ ವರ್ಗದವರಿಗೂ ಬಿಸಿನೆಸ್ ಐಡಿಯಾಗಳನ್ನು ನೀಡುತ್ತಾ, ಆ ಉದ್ಯಮದ ಸಾಧಕ-ಬಾಧಕಗಳನ್ನು ತಿಳಿಸುತ್ತಿರುವುದೇ ವಿಸ್ತಾರ ಬಿಸಿನೆಸ್. ಇದಲ್ಲದೆ ವಾಣಿಜ್ಯ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳ ಚಿತ್ರಣಗಳನ್ನೂ ಈ ಚಾನೆಲ್ನಲ್ಲಿ ವಿವರವಾಗಿ ಕಟ್ಟಿಕೊಡಲಾಗುವುದು.